ಇಸ್ರೇಲ್ ಸೇನೆಯಿಂದ ಗುಂಡಿನ ದಾಳಿ: ಪೆಲೆಸ್ತೀನ್ ಪ್ರಜೆ ಮೃತ್ಯು

Update: 2021-09-01 17:06 GMT
FILE PHOTO : PTI [ಸಾಂದರ್ಭಿಕ ಚಿತ್ರ]

ರಮಲ್ಲಾ, ಸೆ.1: ಆಕ್ರಮಿತ ವೆಸ್ಟ್ಬ್ಯಾಂಕ್ ಪ್ರದೇಶದಲ್ಲಿ ತಡರಾತ್ರಿ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಪೆಲೆಸ್ತೀನ್ ಪ್ರಜೆಯೊಬ್ಬ ಮೃತಪಟ್ಟಿರುವುದಾಗಿ ಪೆಲೆಸ್ತೀನ್ನ ಆರೋಗ್ಯ ಇಲಾಖೆ ಬುಧವಾರ ಹೇಳಿದೆ.

ರಮಲ್ಲಾದ ಪಶ್ಚಿಮದಲ್ಲಿರುವ ಬಿಯೆತುರ್ ಅಲ್ತಹ್ತಾ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದ್ದು ಈ ಸಂದರ್ಭ ಅಲ್ಲಿ ಪ್ರತಿಭಟನೆ ಅಥವಾ ಘರ್ಷಣೆ ನಡೆಯತ್ತಿರಲಿಲ್ಲ. ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮದ ನಿವಾಸಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಇಸ್ರೇಲ್ ಸೇನೆಯ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ಮೃತ ವ್ಯಕ್ತಿ ಜೆರುಸಲೇಂನ ಗುರುತು ಚೀಟಿ ಹೊಂದಿದ್ದರಿಂದ ಈತನಿಗೆ ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ ನಡುವೆ ಮುಕ್ತವಾಗಿ ಸಂಚರಿಸಲು ಅವಕಾಶವಿತ್ತು. ಘಟನೆ ಬಗ್ಗೆ ಪರಿಶೀಲಿಸುವುದಾಗಿ ಇಸ್ರೇಲ್ ಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News