×
Ad

ಮೃತ ಭಾರತೀಯ ಯೋಧರ ಮಕ್ಕಳಿಗೆ ಕೆನಡಾದಲ್ಲಿ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು: ಸಿಐಎಫ್

Update: 2021-09-02 21:05 IST
photo: twitter.com/Cif_Official1

ಟೊರಾಂಟೊ, ಸೆ.2: ಯುದ್ಧದಲ್ಲಿ ಮೃತಪಟ್ಟ ಭಾರತೀಯ ಯೋಧರ ಮಕ್ಕಳು ಕೆನಡಾದಲ್ಲಿ ಉನ್ನತ ಅಧ್ಯಯನ ನಡೆಸಲು ಬಯಸುವುದಾದರೆ ಅವರಿಗೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಭಾರತ-ಕೆನಡಾ ಸಮಾಜ ಸೇವಾ ಸಂಘಟನೆ ಸಿಐಎಫ್ ಹೇಳಿದೆ.

ಈ ನಿಟ್ಟಿನಲ್ಲಿ ನಿಧಿ ಸಂಗ್ರಹಿಸಲು ಕಳೆದ ವಾರ ಆಯೋಜಿಸಲಾಗಿದ್ದ ಪ್ರದರ್ಶನ ಗಾಲ್ಫ್ ಟೂರ್ನಿಯ ಮೂಲಕ ಸುಮಾರು 1 ಲಕ್ಷ ಡಾಲರ್ ನಷ್ಟು ನೆರವು ಸಂಗ್ರಹಿಸಲಾಗಿದೆ ಎಂದು ಟೊರಂಟೊ ಮೂಲದ ಕೆನಡಾ-ಇಂಡಿಯಾ ಫೌಂಡೇಷನ್(ಸಿಐಎಫ್) ಹೇಳಿದೆ. ನೆರವಿನ ಅಗತ್ಯವಿರುವ ಸೇನಾ ಸಿಬಂದಿಗಳ ಕುಟುಂಬದವರಿಗೆ ನೆರವು ನೀಡುವ ಮೂಲ ಉದ್ದೇಶದ ಜತೆಗೆ, ಯುದ್ಧರಂಗದಲ್ಲಿ ಮೃತರಾದ ಸೇನಾ ಸಿಬ್ಬಂದಿಗಳ ಮಕ್ಕಳಿಗೆ ಕೆನಡಾದಲ್ಲಿ ಉನ್ನತ ಶಿಕ್ಷಣ ಪಡೆಯಲು ನೆರವಾಗಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಕಳೆದ ವಾರ ನಡೆದ ಪ್ರರ್ದಶನ ಗಾಲ್ಫ್ ಪಂದ್ಯಾಟದ ಸಂದರ್ಭ ಕೆನಡಾದಲ್ಲಿ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು ಎಂದು ಸಿಐಎಫ್ ಅಧ್ಯಕ್ಷ ಸತೀಶ್ ಠಕ್ಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News