ಕೇರಳದಲ್ಲಿ ಕೋವಿಡ್-19 ಹೆಚ್ಚಳ: 11ನೇ ತರಗತಿಯ ಪರೀಕ್ಷೆಗೆ ತಡೆ ಹೇರಿದ ಸುಪ್ರೀಂ ಕೋರ್ಟ್

Update: 2021-09-03 11:54 GMT

ಹೊಸದಿಲ್ಲಿ: ಕೇರಳದ ಆತಂಕಕಾರಿ ಕೋವಿಡ್ -19 ಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿರುವ  ಸುಪ್ರೀಂ ಕೋರ್ಟ್ 11 ನೇ ತರಗತಿಯ ಆಫ್ ಲೈನ್ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿದೆ. ಪರೀಕ್ಷೆಗಳನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲು  ಆದೇಶಿಸಿದೆ.

"ಕೇರಳದಲ್ಲಿ ಆತಂಕಕಾರಿ ಸನ್ನಿವೇಶವಿದೆ.  ಈ ರಾಜ್ಯವು ದೇಶದಲ್ಲಿ ಶೇ. 70 ಕ್ಕಿಂತಲೂ ಹೆಚ್ಚಿನ ಪ್ರಕರಣಗಳನ್ನು ಹೊಂದಿದೆ. ಸುಮಾರು 35,000 ದೈನಂದಿನ ಪ್ರಕರಣಗಳು ವರದಿಯಾಗುತ್ತಿದೆ. ಎಳೆ ವಯಸ್ಸಿನ ಮಕ್ಕಳನ್ನು ಈ ಅಪಾಯಕ್ಕೆ ಒಳಪಡಿಸಲಾಗುವುದಿಲ್ಲ" ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ , ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಹಾಗೂ  ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್ ಅವರಿದ್ದ ಪೀಠ ಹೇಳಿದೆ.

"ನಾನು ಕೇರಳದ ಮುಖ್ಯ ನ್ಯಾಯಮೂರ್ತಿಯಾಗಿದ್ದೆ ಹಾಗೂ ಕೇರಳವು ದೇಶದ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯಗಳನ್ನು ಹೊಂದಿದೆ ಎಂದು ನಾನು ಹೇಳಬಲ್ಲೆ. ಅದರ ಹೊರತಾಗಿಯೂ ಕೇರಳಕ್ಕೆ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ’’ಎಂದು ಜಸ್ಟಿಸ್ ರಾಯ್ ಹೇಳಿದರು.

ಕೇರಳದಲ್ಲಿ ಆಫ್‌ಲೈನ್ 11 ನೇ ತರಗತಿಯ ಪರೀಕ್ಷೆಗಳು ಸೆಪ್ಟೆಂಬರ್ 6 ರಿಂದ ಆರಂಭವಾಗಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News