×
Ad

"ಕೋಮುವಾದಿ ಅಧಿಕಾರಿ ಚಾರ್ಜ್‍ಶೀಟ್ ಸಿದ್ಧಪಡಿಸಿದ್ದಾರೆ": ದಿಲ್ಲಿ ಕೋರ್ಟ್ ಗೆ ತಿಳಿಸಿದ ಉಮರ್ ಖಾಲಿದ್

Update: 2021-09-03 17:25 IST
ಉಮರ್ ಖಾಲಿದ್ (File Photo: 

ಹೊಸದಿಲ್ಲಿ: ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಜೆಎನ್‍ಯು ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಿ ಅವರೊಬ್ಬ ಕೋಮುವಾದಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆಯಾದರೂ ವಾಸ್ತವವಾಗಿ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತವರ ಮನಃಸ್ಥಿತಿ ಕೋಮುವಾದಿಯಾಗಿದೆ ಎಂದು ಖಾಲಿದ್ ಪರ ವಕೀಲರು ಇಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಹೇಳಿದರು ಎಂದು indianexpress.com ವರದಿ ಮಾಡಿದೆ.

ಖಾಲಿದ್ ವಿರುದ್ಧದ ಚಾರ್ಜ್ ಶೀಟ್ ಟಿವಿ ಚಾನಲ್ ಸ್ಕ್ರಿಪ್ಟ್ ನಂತಿದೆ ಎಂದು ವಕೀಲ ತ್ರಿದೀಪ್ ಪಾಯಸ್ ಅವರು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಮುಂದೆ ಹೇಳಿದರು.

ಚಾರ್ಜ್‍ಶೀಟ್‍ನಲ್ಲಿರುವ ಹೇಳಿಕೆಗಳಿಗೂ ಹ್ಯಾರಿ ಪಾಟರ್ ವಿಲನ್ ವೋಲ್ಡ್ ಮೋರ್ಟ್‍ಗೂ ಸಾಮ್ಯತೆ ಕಲ್ಪಿಸಿದ ವಕೀಲರು, ಪೊಲೀಸರು ಸಲ್ಲಿಸಿರುವ ಅಂತಿಮ ವರದಿ ಅಸಂಬದ್ಧ ಎಂದೂ ಹೇಳಿದರು.

ಚಾರ್ಜ್ ಶೀಟ್ ಒಂದೆಡೆ "ಉಮರ್ ಖಾಲಿದ್, ದೇಶದ್ರೋಹದಲ್ಲಿ ಹಿರಿಯರು'' ಎಂದು ಬರೆದಿರುವುದನ್ನು ಉಲ್ಲೇಖಿಸಿದ ಅವರು "ಹೀಗೆ ಚಾರ್ಜ್ ಶೀಟ್ ಬರೆಯಲಾಗುತ್ತದೆಯೇ?,'' ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News