×
Ad

ಮರ ಬಿದ್ದು ಮೃತ್ಯು: ಕುಟುಂಬಕ್ಕೆ ಪರಿಹಾರಧನ ವಿತರಣೆ

Update: 2021-09-03 19:11 IST

ಬ್ರಹ್ಮಾವರ, ಸೆ.3: ಮರ ಬಿದ್ದು ಮೃತಪಟ್ಟ ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿ ಪ್ರವೀಣ್ ಶೆಟ್ಟಿ ಕುಟುಂಬಕ್ಕೆ ಸರಕಾರದಿಂದ ಮಂಜೂರಾಗಿ 5 ಲಕ್ಷ ರೂ. ಪರಿಹಾರ ಧನದ ಚೆಕ್ಕನ್ನು ಸೆ.3ರಂದು ವಿತರಿಸಲಾಯಿತು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮೃತರ ಮನೆಗೆ ಭೇಟಿ ನೀಡಿ ಮೃತರ ತಾಯಿ ಸರೋಜಾ ಅವರಿಗೆ ಚೆಕ್‌ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಚೇರ್ಕಾಡಿ ಗ್ರಾಪಂ ಅಧ್ಯಕ್ಷೆ ರೇಖಾ ಭಟ್, ಉಪಾಧ್ಯಕ್ಷ ಕಿಟ್ಟಪ್ಪಅಮೀನ್, ಸದಸ್ಯರಾದ ಕಮಲಾಕ್ಷ್ ಹೆಬ್ಬಾರ್, ನಾರಾಯಣ್ ನಾಯ್ಕ್, ಮಧುರ, ಪ್ರಭಾಕರ್, ಸರಿತಾ ಸಂತೋಷ್, ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ ಹಾಗೂ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News