×
Ad

ಮಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ ಕಚೇರಿ ಆರಂಭ

Update: 2021-09-03 20:24 IST

ಮಂಗಳೂರು, ಸೆ.3: ಭಾರತ ಸರಕಾರದ ಕಂದಾಯ ಇಲಾಖೆಯ ಜಾರಿ ನಿರ್ದೇಶನಾಲಯದ (ಇ.ಡಿ.) ನೂತನ ಉಪ ವಲಯ ಕಚೇರಿಯು ಮಂಗಳೂರಿನ ಕಂಕನಾಡಿಯ ಕೇಂದ್ರ ಅಬಕಾರಿ ಸಿಬ್ಬಂದಿ ಕ್ವಾರ್ಟರ್ಸ್‌ನಲ್ಲಿ ಶುಕ್ರವಾರ ಆರಂಭಿಸಿದೆ.

ಈ ಹೊಸ ಉಪ ವಲಯದ ಕಚೇರಿಯು ಬೆಂಗಳೂರು ವಲಯ ಕಚೇರಿಯ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಉಪ ವಲಯದ ಕಚೇರಿಯು ಉಪ ನಿರ್ದೇಶಕರ ನೇತೃತ್ವದಲ್ಲಿ ಕಾರ್ಯಾಚರಿಸಲಿದೆ. ಇದು ಕರ್ನಾಟಕದ 15 ಜಿಲ್ಲೆಗಳಾದ ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಗದಗ, ಹಾವೇರಿ, ದಾವಣಗೆರೆ, ಧಾರವಾಡ, ಗುಲಬರ್ಗಾ, ಉತ್ತರ ಕನ್ನಡ, ಕೊಪ್ಪಳ, ಉಡುಪಿ ಮತ್ತು ರಾಯಚೂರು ವ್ಯಾಪ್ತಿಯನ್ನು ಹೊಂದಿದೆ.

ಕಚೇರಿಯ ವಿಳಾಸ: ಇ-7, ಕೇಂದ್ರ ಅಬಕಾರಿ ಸಿಬ್ಬಂದಿ ಕ್ವಾರ್ಟರ್ಸ್, ಕಂಕನಾಡಿ, ಮಂಗಳೂರು-575002, ಇ-ಮೇಲ್: ddmgszo-ed@gov.inನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News