ಉಡುಪಿ; ವಾರಾಂತ್ಯ ಕರ್ಫ್ಯೂ: ಬಸ್ ಸಂಚಾರ ಭಾಗಶಃ ಸ್ಥಗಿತ
Update: 2021-09-03 20:33 IST
ಉಡುಪಿ, ಸೆ.3: ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸೆ.4 ಮತ್ತು 5ರಂದು ಸರ್ವಿಸ್ ಹಾಗೂ ಸಿಟಿ ಬಸ್‌ಗಳನ್ನು ಓಡಿಸದಿರಲು ಕೆನರಾ ಬಸ್ ಮಾಲಕರ ಸಂಘ ನಿರ್ಧರಿಸಿದೆ.
‘ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜನ ಸಂಚಾರ ವಿರಳ ಇರುವುದರಿಂದ ಈ ಎರಡು ದಿನಗಳ ಕಾಲ ಸರ್ವಿಸ್ ಹಾಗೂ ಸಿಟಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಕೆಲವು ಮಾಲಕರು ಬಸ್ ಓಡಿಸುವ ಸಾಧ್ಯತೆ ಇದೆ’ ಎಂದು ಕೆನರಾ ಬಸ್ ಮಾಲಕರ ಸಂಘದ ಕಾರ್ಯ ದರ್ಶಿ ಹಾಗೂ ಉಡುಪಿ ಜಿಲ್ಲಾ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.
ಆದರೆ ಕರಾವಳಿ ಬಸ್ ಮಾಲಕರ ಸಂಘದ ಅಧೀನದಲ್ಲಿರುವ ಭಾರತಿ ಬಸ್ ಗಳು ಉಡುಪಿಯಿಂದ ಕುಂದಾಪುರ, ಕಾರ್ಕಳ, ಹೆಬ್ರಿ, ಮಂಗಳೂರು ಮಾರ್ಗ ದಲ್ಲಿ ಸಂಚಾರ ನಡೆಸಲಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.