ಕಾಮಿಕ್ ಸ್ಟ್ರಿಪ್ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಶಮಾ ಮುಸ್ಕಾನ್ ದ್ವಿತೀಯ
Update: 2021-09-03 20:36 IST
ಕುಂದಾಪುರ, ಸೆ. 3: ಮಂಗಳೂರು ಹಂಪನಕಟ್ಟೆಯ ಮಿಲಾಗ್ರೀಸ್ ಕಾಲೇಜಿನ ದಶಮಾನೋತ್ಸವದ ಅಂಗವಾಗಿ ಕಾಲೇಜಿನ ಲಲಿತ-ಕಲಾ ಘಟಕದ ವತಿಯಿಂದ ಆಯೋಜಿಸಲಾದ ಕಾಮಿಕ್ ಸ್ಟ್ರಿಪ್ ಸ್ಪರ್ಧೆಯಲ್ಲಿ ಕೋಡಿ ಬ್ಯಾರೀಸ್ ಪದವಿ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿ ಶಮಾ ಮುಸ್ಕಾನ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರಿಗೆ ಕಾಲೇಜು ಆಡಳಿತ ಮಂಡಳಿ, ನಿರ್ದೇಶಕರು ಹಾಗೂ ಉಪನ್ಯಾಸಕರು ಶುಭ ಹಾರೈಸಿದ್ದಾರೆ.