ಮಲ್ಪೆ ತೊಟ್ಟಂ ಸಮೀಪ ಕೈರಂಪಣಿ ಬಲೆಗೆ ಬಿದ್ದ ರಾಶಿ ರಾಶಿ ಪಾಂಪ್ಲೆಟ್ !

Update: 2021-09-03 16:40 GMT

ಉಡುಪಿ, ಸೆ.3: ಮಲ್ಪೆ ಸಮೀಪದ ತೊಟ್ಟಂ ಪರಿಸರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯಾದ ಕೈರಂಪಣಿ ಬಲೆಗೆ ಇಂದು ಬೆಳಗಿನ ಜಾವ ರಾಶಿ ರಾಶಿ ದುಬಾರಿ ಬೆಲೆಯ ಪಾಂಪ್ಲೆಟ್ ಮೀನುಗಳು ದೊರೆತಿವೆ.

ಸಮುದ್ರ ತೀರದಲ್ಲಿ ನಾಡದೋಣಿಗಳನ್ನು ಬಳಸಿ ಸುಮಾರು 40 ಮಂದಿ ಮೀನುಗಾರರು ಕೈರಂಪಣಿ ಮೀನುಗಾರಿಕೆಯನ್ನು ನಡೆಸುತ್ತಾರೆ. ಈ ಬಲೆಗೆ ಲಕ್ಷಾಂತರ ರೂ. ಮೌಲ್ಯದ ರಾಶಿ ಮೀನುಗಳು ಬಿದ್ದಿವೆ. ಇದರಿಂದ ಕೈಪಂಣಿ ಮೀನುಗಾರರಿಗೆ ಜಾಕ್ಪಾಟ್ ಹೊಡೆದಿದೆ. ಇದರಿಂದ ಮೀನುಗಾರರು ಫುಲ್ ಖುಷ್ ಆಗಿದ್ದಾರೆ.

ಸಾದಾರಣ ಸೈಜಿನ ಪಾಂಪ್ಲೆಟ್ ಮೀನುಗಳು ಒಟ್ಟು 1300 ಕೆ.ಜಿ.ಯಷ್ಟು ದೊರೆತಿದ್ದು, ಒಂದು ಕೆ.ಜಿ.ಯಲ್ಲಿ 12 ಮೀನುಗಳು ಹಿಡಿಯುತ್ತವೆ. ಒಂದು ಕೆ.ಜಿ. ಈ ಮೀನಿಗೆ 320 ರೂ. ಮೌಲ್ಯ ಇದೆ. ಕೈರಂಪಣ್ಣಿ ಬಲೆಗೆ ಇದೇ ಮೊದಲ ಬಾರಿಗೆ ಪಾಂಪ್ಲೆಟ್ ಮೀನು ದೊರೆತಿದೆ ಎಂದು ಕೈರಂಪಣಿ ಮೀನುಗಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News