ಯುವಕ ಆತ್ಮಹತ್ಯೆ
Update: 2021-09-03 22:25 IST
ಶಂಕರನಾರಾಯಣ, ಸೆ.3: ವೈಯಕ್ತಿಕ ಕಾರಣದಿಂದ ಮನನೊಂದ ಯುವಕ ನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.2ರಂದು ರಾತ್ರಿ ಅಂಪಾರು ಗ್ರಾಮದ ಶಾನ್ಕಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಶಾನ್ಕಟ್ಟು ನಿವಾಸಿ ಭಾರ್ಗವ(21) ಎಂದು ಗುರುತಿಸಲಾಗಿದೆ. ಇವರು, ಅಜ್ಜ ಅಜ್ಜಿಯೊಂದಿಗೆ ವಾಸವಾಗಿದ್ದು, ಮಂಗಳೂರಿನಲ್ಲಿ ಸಣ್ಣ ಉದ್ದಿಮೆ ಮಾಡಿಕೊಂಡು ವಿದ್ಯಾಬ್ಯಾಸ ಮುಂದುವರಿಸಿಕೊಂಡಿದ್ದನು. ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯೊಳಗಡೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.