×
Ad

ಕಾರ್ಯಕ್ರಮ ಮುಂದೂಡಿಕೆ

Update: 2021-09-03 22:27 IST

ಉಡುಪಿ, ಸೆ.3: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.4 ಮತ್ತು 5ರಂದು ನಡೆಸಲು ಉದ್ದೇಶಿಸಲಾಗಿದ್ದ ಕರ್ನಾಟಕ ರಾಜ್ಯ ಹಿರಿಯರ ಹಾಗೂ ಕಿರಿಯರ 23ರ ವಯೋಮಿತಿಯ ಪುರುಷ ಮತ್ತು ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್‌ ಶಿಪ್‌ನ್ನು ಸೆ.6 ಮತ್ತು 7ಕ್ಕೆ ಮುಂದೂಡಲಾಗಿದೆ.

ಅದೇ ರೀತಿ ಟೀಮ್ ನೇಶನ್ ಫಸ್ಟ್ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಉಡುಪಿಯ ಒಟ್ಟು 100 ಗ್ರಾಮಗಳಲ್ಲಿ ಹಾದು ಹೋಗುವ ‘ಫಿಟ್ ರಹೋ ಉಡುಪಿ’ 75 ಕಿ.ಮೀ. ಓಟವನ್ನು ಕೂಡ ಸೆ.6 ಮತ್ತು 7ಕ್ಕೆ ಮುಂದೂಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News