×
Ad

ಸೈಬರ್ ಕ್ರೈಂ ಪ್ರಕರಣ: ಕೊಲ್ಕತ್ತಾ ಪೊಲೀಸರಿಂದ ಕಡಬದ ಯುವಕನ ಬಂಧನ

Update: 2021-09-04 15:10 IST

ಕಡಬ, ಸೆ.4: ಸೈಬರ್ ಕ್ರೈಂ ಪ್ರಕರಣವೊಂದಕ್ಕೆ ಸಂಬಂಧಿಸಿ ಕಡಬದ ಯುವಕನೋರ್ವನನ್ನು ಪಶ್ಚಿಮ ಬಂಗಾಳ ಪೊಲೀಸರು ಶನಿವಾರದಂದು ಬಂಧಿಸಿದ್ದಾರೆ.

ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ, ಪ್ರಸಕ್ತ ಮಂಗಳೂರಿನಲ್ಲಿ ಟ್ರೇಡಿಂಗ್ ವ್ಯವಹಾರ ನಡೆಸುತ್ತಿರುವ ಸಂಜಯ್ ಕೃಷ್ಣ ಬಂಧಿತ ಆರೋಪಿ. ಪಶ್ಚಿಮ ಬಂಗಾಳ ಮೂಲದ, ಸದ್ಯ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯೊಬ್ಬಳ ಹೆಸರಿನ ನಕಲಿ ಸಾಮಾಜಿಕ ಜಾಲತಾಣ ಖಾತೆ ತೆರೆದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ತನ್ನ ಹೆಸರಿನ ನಕಲಿ ಸಾಮಾಜಿಕ ಜಾಲತಾಣ ಖಾತೆ ಬಗ್ಗೆ ಯುವತಿಯು ಪಶ್ಚಿಮ ಬಂಗಾಳದಲ್ಲಿ ದೂರು ದಾಖಲಿಸಿದ್ದಳು. ಸೈಬರ್ ಕ್ರೈಂನಡಿ ದೂರು ದಾಖಲಿಸಿಕೊಂಡಿರುವ ಕೊಲ್ಕತ್ತಾ ಪೊಲೀಸರು ಇಂದು ಕಡಬಕ್ಕೆ ಆಗಮಿಸಿ ಆರೋಪಿ ಸಂಜಯ್ ಕೃಷ್ಣನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News