ರಾಜಸ್ಥಾನ: 6 ಜಿಲ್ಲೆಗಳ ಪಂಚಾಯತ್ ಸಮಿತಿಯಲ್ಲಿ 231 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್

Update: 2021-09-04 12:38 GMT

ಜೈಪುರ: ರಾಜಸ್ಥಾನದ ಆರು ಜಿಲ್ಲೆಗಳಲ್ಲಿ ಮೂರು ಹಂತಗಳಲ್ಲಿ 78 ಪಂಚಾಯತ್ ಸಮಿತಿಯ ಒಟ್ಟು 1,564 ಸ್ಥಾನಗಳಿಗೆ ನಡೆದಿರುವ  ಚುನಾವಣೆಯಲ್ಲಿ ಆಡಳಿತಾರೂಢ  ಕಾಂಗ್ರೆಸ್ 231 ಸ್ಥಾನಗಳನ್ನು ಗೆದ್ದುಕೊಂಡರೆ, ಪ್ರತಿಪಕ್ಷ ಬಿಜೆಪಿ 185 ರಲ್ಲಿ ಜಯಭೇರಿ ಬಾರಿಸಿದೆ.  

ಆರು ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಮತ ಎಣಿಕೆ ಆರಂಭವಾಯಿತು. ಜೋಧ್‌ಪುರದಲ್ಲಿ ಜಿಲಾ ಪರಿಷತ್‌ನ ಒಂದು ಸ್ಥಾನವನ್ನು ಕಾಂಗ್ರೆಸ್ ಗೆದ್ದಿದೆ.

1 ಗಂಟೆಯವರೆಗೆ ಲಭ್ಯವಾಗಿರುವ ಫಲಿತಾಂಶದಲ್ಲಿ  ಆರು ಜಿಲ್ಲೆಗಳ 78 ಪಂಚಾಯತ್ ಸಮಿತಿಯ ಒಟ್ಟು 1,564 ಸ್ಥಾನಗಳಲ್ಲಿ ಕಾಂಗ್ರೆಸ್ 231, ಬಿಜೆಪಿ 185, ಆರ್‌ಎಲ್‌ಪಿ 16 ಹಾಗೂ  ಬಿಎಸ್‌ಪಿ ಮೂರು ಸ್ಥಾನಗಳನ್ನು ಗೆದ್ದಿದೆ. ಪಕ್ಷೇತರರು 111 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಜಿಲ್ಲಾ ಪರಿಷತ್‌ನ ಒಟ್ಟು 200 ಸ್ಥಾನಗಳಲ್ಲಿ, ಒಂದು ಸ್ಥಾನಕ್ಕೆ ಇಲ್ಲಿಯವರೆಗೆ ಫಲಿತಾಂಶವನ್ನು ಘೋಷಿಸಲಾಗಿದೆ. ಇದನ್ನು ಕಾಂಗ್ರೆಸ್ ವಶಪಡಿಸಿಕೊಂಡಿದೆ.

ಭರತ್‌ಪುರ, ದೌಸಾ, ಜೈಪುರ, ಜೋಧ್‌ಪುರ, ಸವಾಯಿ ಮಾಧೋಪುರ  ಹಾಗೂ  ಸಿರೋಹಿ ಜಿಲ್ಲೆಗಳಲ್ಲಿ ಒಟ್ಟು ಆರು ಜಿಲ್ಲಾ ಪರಿಷತ್‌ನ 200 ಸದಸ್ಯರು ಹಾಗೂ  78 ಪಂಚಾಯತ್ ಸಮಿತಿಯ 1,564 ಸದಸ್ಯರನ್ನು ಆಯ್ಕೆ ಮಾಡಲು ಆಗಸ್ಟ್ 26, 29 ಹಾಗೂ  ಸೆಪ್ಟೆಂಬರ್ 1 ರಂದು ಮತದಾನ ನಡೆದಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News