ಮುಂಬೈ: 7 ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ, ಅಗ್ನಿಶಾಮಕ ದಳದ ಸಿಬ್ಬಂದಿಗೆ ಗಾಯ

Update: 2021-09-04 10:39 GMT
ಫೋಟೊ ಕೃಪೆ: ANI 

ಮುಂಬೈ: ಮುಂಬೈನ ಉಪನಗರ ಬೊರಿವಲಿಯಲ್ಲಿರುವ ಏಳು ಅಂತಸ್ತಿನ ವಸತಿ ಕಟ್ಟಡದ ಮೇಲಿನ ಮಹಡಿಯಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ  ನಡೆದಿರುವ ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈನ ಬೊರಿವಲಿ ಪಶ್ಚಿಮದಲ್ಲಿರುವ ಗಂಜವಾಲಾ ರೆಸಿಡೆನ್ಸಿ ಕಟ್ಟಡದಲ್ಲಿ ಬೆಳಿಗ್ಗೆ 7 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್‌ ಆಫ್ ಇಂಡಿಯಾಗೆ ತಿಳಿಸಿದರು.

"ಘಟನೆಯ ಬಗ್ಗೆ ಮಾಹಿತಿ ಲಭಿಸಿದ ನಂತರ, ಕೆಲವು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಆರಂಭಿಸಿದರು ಹಾಗೂ ಜನರನ್ನು ರಕ್ಷಿಸಲು ಆರಂಭಿಸಿದರು. 43 ವರ್ಷದ ಅಗ್ನಿಶಾಮಕ ಸಿಬ್ಬಂದಿ ನಾಥು ಸರ್ಜೇರಾವ್ ಬಾಧಕ್ ಅವರಿಗೆ 8 ರಿಂದ 12 ಪ್ರತಿಶತದಷ್ಟು ಸುಟ್ಟ ಗಾಯಗಳಾಗಿವೆ. ಕಟ್ಟಡದ ಎಲ್ಲಾ ನಿವಾಸಿಗಳು ಸುರಕ್ಷಿತವಾಗಿದ್ದಾರೆ’’ ಎಂದರು.

ಬೆಳಿಗ್ಗೆ 9: 30 ರ ಸುಮಾರಿಗೆ ಬೆಂಕಿಯನ್ನು ನಂದಿಸಲಾಯಿತು.  ಬಧಕ್ ಅವರನ್ನು ಕಾಂದಿವಲಿಯ ಶತಾಬ್ದಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News