ಪ್ರಧಾನಿಗೆ ಧನ್ಯವಾದ ಹೇಳಲು ಬಿಜೆಪಿಯಿಂದ 5 ಕೋಟಿ ಪೋಸ್ಟ್‌ಕಾರ್ಡ್ ಅಭಿಯಾನ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ "ಸಾರ್ವಜನಿಕ ಸೇವೆಯಲ್ಲಿ 20 ವರ್ಷಗಳ’ ಸವಿ ನೆನಪಿಗಾಗಿ ಸೆಪ್ಟೆಂಬರ್ 17 ರಂದು ಪ್ರಧಾನಿಯವರ 71 ನೇ ಹುಟ್ಟುಹಬ್ಬ ದಿನದಂದು 20 ದಿನಗಳ ಮೆಗಾ ಕಾರ್ಯಕ್ರಮ "ಸೇವೆ ಹಾಗೂ ಸಮರ್ಪಣ್ ಅಭಿಯಾನ್" ಆರಂಭವಾಗಲಿದೆ ಎಂದು ಆಡಳಿತಾರೂಢ ಬಿಜೆಪಿ ಹೇಳಿದೆ.
20 ದಿನಗಳ ಆಚರಣೆಯ ಭಾಗವಾಗಿ ಬಿಜೆಪಿ ಬೃಹತ್ ಸ್ವಚ್ಛತೆ ಹಾಗೂ ರಕ್ತದಾನ ಅಭಿಯಾನಗಳು ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಿದೆ. ಇದಕ್ಕಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಎಲ್ಲಾ ರಾಜ್ಯ ಘಟಕಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಪಕ್ಷದ ಸದಸ್ಯರಾಗಿ ಸಾರ್ವಜನಿಕ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಅವರ ಪ್ರಯತ್ನಗಳಿಗೆ ಅಭಿನಂದಿಸಲು ಐದು ಕೋಟಿ ಪೋಸ್ಟ್‌ಕಾರ್ಡ್‌ಗಳನ್ನು ಭಾರತದಾದ್ಯಂತದ ಬಿಜೆಪಿ ಬೂತ್‌ಗಳಿಂದ ಪ್ರಧಾನಿಗೆ ಕಳುಹಿಸಲಾಗುವುದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
'ಉಚಿತ ಆಹಾರ ಧಾನ್ಯಗಳು ಹಾಗೂ ಬಡವರಿಗೆ ವ್ಯಾಕ್ಸಿನೇಷನ್' ಗಾಗಿ ಕಟೌಟ್ ಗಳ ಮೂಲಕ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ಅರ್ಪಿಸುವುದು ಅಭಿಯಾನದ ಭಾಗವಾಗಿರಲಿದೆ.