×
Ad

'ಕೋವಿಡ್ ಮಾರ್ಗಸೂಚಿಯಂತೆ ಶಿಕ್ಷಕರ ದಿನಾಚರಣೆ'

Update: 2021-09-04 20:54 IST

ಉಡುಪಿ, ಸೆ.4: ಉಡುಪಿಯ ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ ರವಿವಾರ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಕೋವಿಡ್ ಮಾರ್ಗಸೂಚಿುಂತೆ ಸರಳವಾಗಿ ಆಚರಿಸಲಾಗುತ್ತಿದೆ.

ಕಾಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ 17 ಮಂದಿ ಶಿಕ್ಷಕರು, 43 ಮಂದಿ ನಿವೃತ್ತ ಶಿಕ್ಷಕರು ಸೇರಿದಂತೆ ಶಿಕ್ಷಣ ಇಲಾಖೆ ಕಚೇರಿಯ ಉಸ್ತುವಾರಿ ಅಧಿಕಾರಿಗಳು ಮಾತ್ರ ಭಾಗವಹಿಸಲು ಅವಕಾಶವಿದ್ದು, ತಮ್ಮ ಸ್ನೇಹಿತರು, ಕುಟುಂಬದವರು, ಬಂಧು ಬಳಗದವರನ್ನು ಕರೆತರಲು ಅವಕಾಶವಿಲ್ಲ.

ಕಾರ್ಯಕ್ರಮಕ್ಕೆ ಆಗಮಿಸುವರು ಗುರುತು ಚೀಟಿಯೊಂದಿಗೆ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಹಾಗೂ ಜ್ವರ, ಶೀತ, ಕೆಮ್ಮು ಇರುವವರು ಕಾರ್ಯಕ್ರಮಕ್ಕೆ ಹಾಜರಾಗದಂತೆ ಡಿಡಿಪಿಐ ಎನ್. ಎಚ್.ನಾಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News