×
Ad

ಉಡುಪಿ: ಬಸ್ ದರ ಇಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Update: 2021-09-04 21:01 IST

ಉಡುಪಿ, ಸೆ.4: ವಿಪರೀತ ಹೆಚ್ಚಳವಾಗಿರುವ ಖಾಸಗಿ ಬಸ್ ದರವನ್ನು ಹಿಂತೆ ಗೆದುಕೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದವು.

ಲಾಕ್‌ಡೌನ್ ನಿಯಮಗಳಲು ಸಡಿಲಗೊಂಡ ನಂತರ ಸಿಟಿ ಬಸ್ ಮತು ಇತರೆ ಖಾಸಗಿ ಬಸ್ ಪ್ರಯಾಣ ದರವನ್ನು ಶೇ.25ರಷ್ಟು ಹೆಚ್ಚಿಸಲಾಗಿದೆ. ಸರಕಾರದೊಂದಿಗೆ ತೆರಿಗೆ ವಿನಾಯಿತಿಗಾಗಿ ಒತ್ತಡ ಹಾಕಿ ಕೆಲವು ರಿಯಾಯಿತಿ ಗಳನ್ನು ಪಡೆದಿರುವ ಬಸ್ ಮಾಲಕರು ಜನತೆಯಿಂದಲೂ ಹೆಚ್ಚು ಹಣ ಪಡೆ ಯುತ್ತಿರುವುದು ವಿಪರ್ಯಾಸ ಎಂದು ಮನವಿಯಲ್ಲಿ ದೂರಲಾಗಿದೆ.

ಕೊರೋನಾ ಪ್ರಥಮ ಅಲೆ ಸಂದರ್ಭದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಏರಿಸಿದ್ದ ಪ್ರಯಾಣದರವನ್ನು ಬಸ್ ಮಾಲಕರು ನಂತರ ಇಳಿಸಿಲ್ಲ. ಈ ಮತ್ತೆ ದರ ಏರಿಕೆ ಮಾಡುವುದು ಸರಿಯಲ್ಲ. ಆದುದರಿಂದ ದರ ಏರಿಕೆಗೆ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಅಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿ ನಿರ್ಧಾರವನ್ನು ಕೈಗೊಳ್ಳಬೇಕು. ಅಲ್ಲದೆ ಏರಿಸಿದ ದರಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಸಿಪಿಐಎಂ ಪಕ್ಷದ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ರೈತ ಸಂಘ ಸಂಚಾಲಕ ಶಶಿಧರ್ ಗೊಲ್ಲ, ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಎಐಎಡಬ್ಲುಯು ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್ ಎಸ್., ಉಡುಪಿ ಬೀಡಿ ಆ್ಯಂಡ್ ಟೊಬ್ಯಾಕೋ ಲೇಬರ್ ಯುನಿಯನ್ನ ಅಧ್ಯಕ್ಷೆ ನಳಿನಿ, ಕಾರ್ಯದರ್ಶಿ ಉಮೇಶ್ ಕುಂದರ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News