ಉಡುಪಿ: ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಲಸಿಕೆ ಶಿಬಿರ
Update: 2021-09-04 21:11 IST
ಉಡುಪಿ, ಸೆ.4: ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಉಚಿತ ಕೋವಿಶೀಲ್ಡ್ ಲಸಿಕೆಯ ಶಿಬಿರವನ್ನು ಇಂದು ಉಡುಪಿ ಜಾಮಿಯಾ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್, ಕಾರ್ಯದರ್ಶಿ ಯು.ಇಬ್ರಾಹಿಂ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಮಾಜಿ ಸದಸ್ಯರಾದ ಗಣೇಶ್ ನೆರ್ಗಿ, ನಾರಾಯಣ್ ಕುಂದರ್, ತೆಂಕನಿಡಿಯೂರು ಗ್ರಾಪಂ ಮಾಜಿ ಅಧ್ಯಕ್ಷ ಯತೀಶ್ ಕರ್ಕೇರ ಉಪಸ್ಥಿತರಿದ್ದರು. ಸುಮಾರು 500 ಮಂದಿ ಪ್ರಥಮ ಮತ್ತು ದ್ವಿತೀಯ ಡೋಸ್ ಪಡೆದುಕೊಂಡರು.