×
Ad

ಮೋದಿ ಸಾಧನೆ ಸಹಿಸಲಾರದೆ ಕಾಂಗ್ರೆಸ್ ನಿಂದ ಅಪಪ್ರಚಾರ : ಶಾಸಕ‌ ರಾಜೇಶ್ ನಾಯ್ಕ್

Update: 2021-09-04 22:58 IST

ಬಂಟ್ವಾಳ, ಸೆ.4: ದೇಶವನ್ನು ಲೂಟಿಗೈದ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯನ್ನು ಸಹಿಸಲಾರದೆ  ಹತಾಶೆಯಿಂದ ಅಪಪ್ರಚಾರದಲ್ಲಿ ತೊಡಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಟೀಕಿಸಿದ್ದಾರೆ. 

ಬಂಟ್ವಾಳ ಕ್ಷೇತ್ರದ ಅಮ್ಟೂರು ಗ್ರಾಮದ ವಿವಿಧ ಬಿಜೆಪಿ  ಬೂತ್ ಅಧ್ಯಕ್ಷರಾದ ಶ್ರೀಧರ್ ಪೂಜಾರಿ , ಪ್ರಭಾಕರ್ ಶೆಟ್ಟಿ, ವಿಠಲ ಪ್ರಭು ಹಾಗೂ ಗೋಳ್ತಮಜಲು ಗ್ರಾಮದ ವಿವಿಧ ಬಿಜೆಪಿ ಬೂತ್  ಅಧ್ಯಕ್ಷರುಗಳಾದ ಜಗನ್ನಾಥ, ರಾಜೇಶ್ ಕೊಟ್ಟಾರಿ,  ಪುರುಷೋತ್ತಮ ಮತ್ತು ವಿನಯ ಕುಲಾಲ್ ರವರ ಮನೆಗೆ ನಾಮಫಲಕ ಅಳವಡಿಸಿದ ಬಳಿಕ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವಿರೋಧ ಪಕ್ಷಗಳ ಯಾವುದೇ ಟೀಕೆಗಳಿಗೆ ಕಿವಿಗೊಡದೆ ಬಿಜೆಪಿ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಗ್ರಾಮದ ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಬಲಿಷ್ಠವಾದರೆ ಮಾತ್ರ ಪಕ್ಷ ಸಂಘಟನಾತ್ಮಕ ವಾಗಿ ಬೆಳೆಯಲು ಸಾಧ್ಯ ಎಂದ ಶಾಸಕರು ಹಿರಿಯರ ಹೋರಾಟ, ಕಾರ್ಯಕರ್ತರ ಶ್ರಮದ ಫಲವಾಗಿ ಪ್ರಸ್ತುತ ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮುಂಬರುವ ಪ್ರತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು. 

ನೆಟ್ಲ ದೇವಸ್ಥಾನದವರೆಗೆ ಸುಮಾರು 1.60  ಕೋಟಿ ರೂ .ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಇನ್ನಷ್ಟು  ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳುವ  ಭರವಸೆಯನ್ನು ನೀಡಿದರಲ್ಲದೆ ಗ್ರಾಮದ ಹಿರಿಯರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಂತ,ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ ಕಾಂಗ್ರೇಸ್ ಅವಧಿಯಲ್ಲಿ ಅಲ್ಪಸಂಖ್ಯಾತರ ಒಲೈಕೆ ರಾಜಕಾರಣ ಸಾಧನೆಯಾದರೆ,  ಶಾಸಕ ರಾಜೇಶ್ ನಾಯ್ಕ್ ಅವರ ಅಲ್ಪ  ಅವಧಿಯಲ್ಲಿ ಅನೇಕ ವರ್ಷಗಳಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ  ಎಂದು ಸಂತಸ ವ್ಯಕ್ತಪಡಿಸಿದರು.

ಗೋಳ್ತಮಜಲು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬೇಡಿಕೆಯಿದ್ದು, ಶಾಸಕರು ಈ ಮನವಿಗೆ ಈಗಾಗಲೇ ಸ್ಪಂದಿಸಿದ್ದಾರೆ.ಬೂತ್ ಮಟ್ಟದ ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು ಇವರನ್ನು ಗುರುತಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್  ಗ್ರಾ.ಪಂ.ಸದಸ್ಯರುಗಳಾದ ಪ್ರೇಮ ,ಲಖಿತ ಆರ್ .ಶೆಟ್ಟಿ,  ಲೀಲಾವತಿ, ಜಯಂತ ಗೌಡ,  ಇಲ್ಯಾಸ್ , ಪವಿತ್ರ , ಗೋಪಾಲಕೃಷ್ಣ ಪೂವಳ, ಸುಷ್ಮಾ, ಲಕ್ಮೀ ವಿ.ಪ್ರಭು,  ಬಂಟ್ವಾಳ ಬಿಜೆಪಿ ಪ್ರ. ಕಾರ್ಯ ದರ್ಶಿ ಡೊಂಬಯ್ಯ ಅರಳ,ರವೀಶ್ ಶೆಟ್ಟಿ ಕರ್ಕಳ,ಪ್ರಮುಖರಾದ ವಜ್ರನಾಥ ಕಲ್ಲಡ್ಕ,ಮೋನಪ್ಪ ದೇವಸ್ಯ,   ದಿನೇಶ್ ಅಮ್ಟೂರು,  ರಮನಾಥ ರಾಯಿ,  ಗಣೇಶ್ ರೈ ಮಾಣಿ,  ಚಿದಾನಂದ ಪಟ್ಟೆಕೋಡಿ, ಲೋಕೇಶ್ ಕೃಷ್ಣ ಕೋಡಿ, ಸುದರ್ಶನ ಬಜ, ಮೋಹನ್ ಪಿ.ಎಸ್ , ಪೂವಪ್ಪ ಶೆಟ್ಟಿ, ವಿಶ್ವನಾಥ ಆಳ್ವ , ಆನಂದ ಶಂಭೂರು , ಜಿತೇಶ್ ಶೆಟ್ಟಿ, ವಿಖ್ಯಾತ್ ಶೆಟ್ಟಿ, ಪ್ರೇಮ ಶೆಟ್ಟಿ, ದೇವಕಿದಿವಾಕರ ಪೂಜಾರಿ, ಇಂದಿರಾ ರೈ, ನಂದಗೋಕುಲ ಮಹಾಬಲ ಶೆಟ್ಟಿ, ತ್ರಿವೇಣಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News