×
Ad

ಎಸ್ಸೆಸ್ಸೆಫ್ ಪ್ರತಿಭೋತ್ಸವ ಸಮಿತಿ ರಚನೆ; ಚೆಯರ್ಮ್ಯಾನಾಗಿ ಕೆ.ಎಂ.ಮುಸ್ತಫಾ ನಈಮಿ

Update: 2021-09-04 23:17 IST

ಮಂಗಳೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ 2 ವರ್ಷಕ್ಕೊಮ್ಮೆ ನಡೆಸುತ್ತಾ ಬರುತ್ತಿರುವ ಸಾಂಸ್ಕೃತಿಕ ಹಾಗು ಪ್ರತಿಭಾನ್ವೇಷಣಾ ಕಾರ್ಯಕ್ರಮ  'ಪ್ರತಿಭೋತ್ಸವ -21'ಇದರ ನಿರ್ವಹಣಾ  ಸಮಿತಿಯ  ಚೆಯರ್ಮ್ಯಾನ್ ಆಗಿ ಕೆ.ಎಂ ಮುಸ್ತಫಾ ನಈಮಿ ಹಾವೇರಿ ಆಯ್ಕೆಯಾಗಿದ್ದಾರೆ.

ಪ್ರತಿಭೋತ್ಸವವು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ರಾಜ್ಯ ಮಟ್ಟದ ಪ್ರತಿಭೋತ್ಸವ ನವೆಂಬರ್ 26ರಿಂದ ನಡೆಯ ಲಿದೆ. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿಮೊಗ್ಗ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ ರವರನ್ನೊಳಗೊಂಡ ಸಮಿತಿಯ   ಕನ್ವೀನರಾಗಿ ವಾಜಿದ್ ಹಾಸನ, ಸದಸ್ಯರುಗಳಾಗಿ ಸಫ್ವಾನ್ ಚಿಕ್ಕಮಗಳೂರು, ಶರೀಫ್ ಕೊಡಗು, ರವೂಫ್ ಖಾನ್ ಕುಂದಾಪುರ, ಮುನೀರ್ ಸಖಾಫಿ ಉಳ್ಳಾಲ, ಮಹಮ್ಮದ್ ಅಲಿ ತುರ್ಕಳಿಕೆ, ಅಝೀಝ್ ಸಖಾಫಿ ಕೊಡಗು ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News