ಅ.2ರಂದು ಬ್ಲ್ಯಾಕ್ ಸ್ಪಾಟ್ ಮುಕ್ತ ಜಿಲ್ಲೆ ಘೋಷಣೆ: ಶಶಿಧರ್ ಕೆ.ಜಿ.

Update: 2021-09-05 15:09 GMT

ಹೆಬ್ರಿ, ಸೆ.5: ನಿರಂತರವಾಗಿ ಕಸ ಎಸೆಯುವ ಜಾಗಗಳನ್ನು ಗುರುತಿಸಿ ಆ ಜಾಗದಲ್ಲಿ ಕಸ ಎಸೆಯದಂತೆ ಕ್ರಮ ವಹಿಸಿ ಅ.2ರಂದು ಉಡುಪಿ ಜಿಲ್ಲೆಯನ್ನು ಬ್ಲ್ಯಾಕ್ ಸ್ಪಾಟ್ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗುವುದು ಎಂದು ಹೆಬ್ರಿ ತಾಪಂ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್ ಕೆ.ಜಿ. ತಿಳಿಸಿದ್ದಾರೆ.

ಅವರು ಸೆ.5 ರಂದು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಹೆಬ್ರಿ ಗ್ರಾಪಂ ಸಹಕಾರದೊಂದಿಗೆ ಚಾರ ಗ್ರಾಪಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ವಲಯ, ಸೀತಾನದಿ ಸೌಖ್ಯ ಯೋಗ ಟ್ರಸ್ಟ್, ಹೆಬ್ರಾಯ್ ಸಂಸ್ಥೆಯ ಸಹಯೋಗದೊಂದಿಗೆ ಸೆ.5ರಂದು ನಡೆದ ಬ್ಲ್ಯಾಕ್ ಸ್ಪಾಟ್ ಮುಕ್ತ ಜಿಲ್ಲೆ ಘೋಷಣೆಯ ಅಂಗವಾಗಿ ಸ್ವಚ್ಛ ನಿರ್ಮಲ ಗ್ರಾಮ ಯೋಜನೆಯಡಿ ಹೆಬ್ರಿ ಪರಿಸರ ಸ್ವಚ್ಛತೆ ಕಾರ್ಯಕ್ರಮಕ್ಕೆ ಹೆಬ್ರಿಯಲ್ಲಿ ಚಾಲೆ ನೀಡಿ ಅವರು ಮಾತನಾಡುತಿದ್ದರು.

ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಚಾರ ವಾದಿರಾಜ್ ಶೆಟ್ಟಿ ಮಾತನಾಡಿ ದರು. ಈ ಸಂದರ್ಭದಲ್ಲಿ ಯೋಗ ಟ್ರಸ್ಟ್ನ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಹೆಬ್ರಿ ವಲಯ ಮೇಲ್ವಿಚಾರಕ ಪ್ರವೀಣ್, ಹೆಬ್ರಾಯ್ ಸಂಸ್ಥೆಯ ಅಧ್ಯಕ್ಷ ದಿನಕರ್ ಪ್ರಭು, ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಡಾ.ಭಾರ್ಗವಿ ಆರ್.ಐತಾಳ್, ಲಯನ್ಸ್ ಜಿಲ್ಲಾ ವಕ್ತಾರ ಟಿ.ಜಿ.ಆಚಾರ್ಯ, ಹೆಬ್ರಿ ಗ್ರಾಪಂ ಪೂರ್ವಾಧ್ಯಕ್ಷ ಸುಧಾಕರ್ ಹೆಗ್ಡೆ, ಸದಸ್ಯ ಜನಾರ್ದನ್, ಡಾ.ರಾಮಚಂದ್ರ ಐತಾಳ್ ,ಡಾ.ಶೋಬಿತ್ ಸೀತಾನದಿ, ಹರೀಶ್ ಪೂಜಾರಿ, ಮಹಾಬಲ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

ಲಯನ್ಸ್ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹೆಬ್ರಿ ವಿನುನಗರ, ಕೆನರಾಬ್ಯಾಂಕ್ ಸುತ್ತಮುತ್ತ ಪ್ರದೇಶಗಳಲ್ಲಿ ಸ್ವಚ್ಛತೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News