×
Ad

ಪಾಕಿಸ್ತಾನದ ಮುಖ್ಯ ಕೋಚ್, ಬೌಲಿಂಗ್ ಕೋಚ್ ಸ್ಥಾನಕ್ಕೆ ಮಿಸ್ಬಾವುಲ್ ಹಕ್, ವಕಾರ್ ಯೂನಿಸ್ ರಾಜೀನಾಮೆ

Update: 2021-09-06 17:28 IST
ಸಂಗ್ರಹ ಚಿತ್ರ,photo: twitter

ಕರಾಚಿ: ಆಘಾತಕಾರಿ ನಿರ್ಧಾರವೊಂದರಲ್ಲಿ ಪಾಕಿಸ್ತಾನದ ಮುಖ್ಯ ತರಬೇತುದಾರ ಮಿಸ್ಬಾವುಲ್ ಹಕ್ ಹಾಗೂ  ಬೌಲಿಂಗ್ ತರಬೇತುದಾರ ವಕಾರ್ ಯೂನಿಸ್ ಟ್ವೆಂಟಿ- 20 ವಿಶ್ವಕಪ್‌ಗೆ ಕೇವಲ ಒಂದು ತಿಂಗಳ ಮೊದಲು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಮಿಸ್ಬಾ ಮತ್ತು ವಕಾರ್ ರಾಜೀನಾಮೆ ನೀಡಿದ್ದಾರೆ ಹಾಗೂ  ಪಾಕಿಸ್ತಾನದ ಮಾಜಿ ಟೆಸ್ಟ್ ಆಟಗಾರರಾದ ಸಕ್ಲೇನ್ ಮುಷ್ತಾಕ್ ಮತ್ತು ಅಬ್ದುಲ್ ರಝಾಕ್ ಸದ್ಯಕ್ಕೆ ಮಧ್ಯಂತರ ಕೋಚ್ ಆಗಿರುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೋಮವಾರ ಪ್ರಕಟಿಸಿದೆ.

ಸೆಪ್ಟೆಂಬರ್ 13 ರಂದು ಮಂಡಳಿಯ ಹೊಸ ಅಧ್ಯಕ್ಷರಾಗಿ ಮಾಜಿ ಟೆಸ್ಟ್ ನಾಯಕ ರಮೀಝ್ ರಾಜಾ ಅಧಿಕಾರ ವಹಿಸಿಕೊಳ್ಳುವ ಮೊದಲೇ ಈ ಹಠಾತ್ ಬದಲಾವಣೆಗಳು ನಡೆದಿವೆ.

 ವೀಕ್ಷಕವಿವರಣೆಗಾರ ಹಾಗೂ ವಿಶ್ಲೇಷಕರಾಗಿರುವ ರಮೀಝ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ  ಮಿಸ್ಬಾ ಹಾಗೂ  ವಕಾರ್ ಪಾಕಿಸ್ತಾನ ತಂಡದ ಅತ್ಯುತ್ತಮ ತರಬೇತುದಾರರೆಂದು ನಾನು ಹೇಳಲಾರೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News