ಸುಮಾರು 40 ವರ್ಷಗಳ ಕಾಲ ಕೋಮಾದಲ್ಲಿದ್ದ ಮಾಜಿ ಫ್ರಾನ್ಸ್ ಡಿಫೆಂಡರ್ ಆಡಮ್ಸ್ ನಿಧನ

Update: 2021-09-06 14:01 GMT
photo: twitter.com/Football__Tweet

ಪ್ಯಾರಿಸ್, ಸೆ.6: ಮಾಜಿ ಫ್ರಾನ್ಸ್ ಡಿಫೆಂಡರ್ ಜೀನ್-ಪಿಯರ್  ಆಡಮ್ಸ್ ಅವರು ತಮ್ಮ 73 ನೇ ವಯಸ್ಸಿನಲ್ಲಿ ನಿಧನರಾದರು.

ವೈದ್ಯಕೀಯ ಪ್ರಮಾದದಿಂದಾಗಿ ಸುಮಾರು 40 ವರ್ಷಗಳ ಕಾಲ ಆಡಮ್ಸ್  ಕೋಮಾದಲ್ಲಿದ್ದರು ಎಂದು ಅವರು ಪ್ರತಿನಿಧಿಸಿದ್ದ ಮಾಜಿ ಕ್ಲಬ್ ಗಳಾದ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್ ಜಿ)ಹಾಗೂ  ನಿಮ್ಸ್ ಸೋಮವಾರ ತಿಳಿಸಿವೆ.

1982 ರಲ್ಲಿ ಆಡಮ್ಸ್ ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಲಿಯೊನ್ ಆಸ್ಪತ್ರೆಗೆ ತೆರಳಿದ್ದರು. ಶಸ್ತ್ರಚಿಕಿತ್ಸೆಗೆ ಮೊದಲು ಸ್ವಲ್ಪ ಸಮಯ ಪ್ರಜ್ಞೆ ತಪ್ಪಿಸಲು ಮಾರಣಾಂತಿಕ ಅರಿವಳಿಕೆ ಡೋಸ್ ನೀಡಲಾಗಿತ್ತು. ಆದರೆ ಈ ಡೋಸ್ ಅವರ ಮೆದುಳಿನ ಹಾನಿಗೆ ಕಾರಣವಾಯಿತು. ಅವರು ಮತ್ತೆ ಎಚ್ಚರಗೊಳ್ಳಲೇ ಇಲ್ಲ. ಆಸ್ಪತ್ರೆಯ ನಿರ್ಲಕ್ಷ್ಯವೇ ಈ ಘಟನೆಗೆ ಹೆಚ್ಚಿನ ಕಾರಣ ಎಂದು ಬಳಿಕ ನ್ಯಾಯಾಲಯ ತೀರ್ಪು ನೀಡಿತ್ತು.

1948ರಲ್ಲಿ ಸೆನೆಗಲ್ ನ ಡಾಕರ್‌ನಲ್ಲಿ ಜನಿಸಿದ್ದ ಆಡಮ್ಸ್ 1970 ರಲ್ಲಿ ಲೆಸ್ ಬ್ಲೀಸ್‌ಗಾಗಿ 22 ಪಂದ್ಯಗಳಲ್ಲಿ ಆಡಿದ್ದರು. ನಂತರ ಅವರು 1970ರಿಂದ 73 ರ ತನಕ ನಿಮ್ಸ್ ಪರವಾಗಿ ಹಾಗೂ  1977-79 ರವರೆಗೆ ಪಿಎಸ್ ಜಿ ಗಾಗಿ ಆಡಿದ್ದರು.

ಕೋಮಾಕ್ಕೆ ಜಾರಿದ ನಂತರ ಆಡಮ್ಸ್‌ರನ್ನು ಅವರ ಪತ್ನಿ ಬರ್ನಾಡೆಟ್ಟೆ ನೋಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News