ನೆಪೋಲಿಯನ್ ಧರಿಸಿದ್ದ ಹ್ಯಾಟ್ ಹರಾಜಿಗೆ ಸಿದ್ಧತೆ

Update: 2021-09-06 17:23 GMT
photo: twitter.com/sharjah24

ಹಾಂಕಾಂಗ್, ಸೆ.6: ಫ್ರಾನ್ಸ್ ನ ಚಕ್ರವರ್ತಿಯಾಗಿದ್ದ ನೆಪೊಲಿಯನ್ ಬೊನಾಪಾರ್ಟೆ ಧರಿಸಿದ್ದ ಹ್ಯಾಟ್ ಎಂದು ಡಿಎನ್ಎ ಪುರಾವೆಗಳಿರುವ ಹ್ಯಾಟ್ ಒಂದನ್ನು ಹರಾಜು ಹಾಕಲು ನಿರ್ಧರಿಸಲಾಗಿದ್ದು ಇದನ್ನು ಹಾಂಕಾಂಗ್ ನ ಬೊನ್ಹಾಮ್ಸ್ ಹರಾಜು ಕೇಂದ್ರದಲ್ಲಿ ಸೋಮವಾರ ಪ್ರದರ್ಶನಕ್ಕೆ ಇಡಲಾಗಿದೆ. ಅಕ್ಟೋಬರ್ 27ರಂದು ಲಂಡನ್ನಲ್ಲಿ ಈ ಹ್ಯಾಟಿನ ಹರಾಜು ಪ್ರಕ್ರಿಯೆ ನಡೆಯಲಿದ್ದು ಅದಕ್ಕೂ ಮುನ್ನ ಇದನ್ನು ಹಾಂಕಾಂಗ್ ಹಾಗೂ ಪ್ಯಾರಿಸ್ ನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಸುಮಾರು 1,38,550 ಡಾಲರ್ ಮೊತ್ತವನ್ನು ಹ್ಯಾಟ್ ನ ಅಂದಾಜು ಬೆಲೆ ಎಂದು ನಿಗದಿಗೊಳಿಸಲಾಗುವುದು ಎಂದು ಬೊನ್ಹಾಮ್ಸ್ ಯುರೋಪ್ ನ ಆಡಳಿತ ನಿರ್ದೇಶಕ ಸೈಮನ್ ಕಾಟ್ಲ್ ಹೇಳಿದ್ದಾರೆ.

 ಯುದ್ಧಕ್ಷೇತ್ರದಲ್ಲಿ ನೆಪೊಲಿಯನ್ ಧರಿಸುತ್ತಿದ್ದ ಹ್ಯಾಟ್ ಎಂದು ಡಿಎನ್ಎ ಮೂಲಕ ಸಾಬೀತಾಗಿರುವ ಇದನ್ನು ಜರ್ಮನಿಯ ಹರಾಜು ಕೇಂದ್ರದಿಂದ ಖರೀದಿಸಲಾಗಿದೆ. ಇದು ನೆಪೋಲಿಯನ್ ಚಕ್ರವರ್ತಿಯ ಹ್ಯಾಟ್ ಎಂದು ಆ ಹರಾಜು ಕೇಂದ್ರದವರಿಗೆ ಮಾಹಿತಿಯಿರಲಿಲ್ಲ. ಖರೀದಿಸಿದವರು ಹ್ಯಾಟ್ ನ ಮೇಲಿನ ಬರಹ ಹಾಗೂ ಇತರ ಗುರುತುಗಳನ್ನು ಗಮನಿಸಿ ಇದು ನೆಪೋಲಿಯನ್ ಗೆ ಸೇರಿದ ಮಹತ್ವದ ವಸ್ತು ಎಂದು ತಿಳಿದುಕೊಂಡರು. ಇಲೆಕ್ಟ್ರಾನಿಕ್ ಸೂಕ್ಷ್ಮದರ್ಶಕದ ಸಹಿತ ಹಲವು ವಿಧಾನಗಳನ್ನು ಬಳಸಿ ಈ ಹ್ಯಾಟನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಈ ಸಂದರ್ಭ 5 ತಲೆಕೂದಲು ಪತ್ತೆಯಾಗಿದ್ದು ಇದನ್ನು ಮತ್ತಷ್ಟು ಸೂಕ್ಷ್ಮ ಅಧ್ಯಯನಕ್ಕೆ ಒಳಪಡಿಸಿದಾಗ ಎರಡು ತಲೆಕೂದಲು ನೆಪೋಲಿಯನ್ ರದ್ದು ಎಂದು ಸಾಬೀತಾಗಿದೆ. ಈ ಹಿಂದೆ ಹರಾಜು ಹಾಕಿದ್ದ ನೆಪೋಲಿಯನ್ರ ಇತರ ಹ್ಯಾಟ್ ಗಳು ತಲಾ 2.5 ಮಿಲಿಯನ್ ಡಾಲರ್ ಗೆ ಮಾರಾಟವಾಗಿದೆ ಎಂದು ಕಾಟ್ಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News