ಬೆಳ್ಳಾರೆ: ಉದ್ಯಮಿ ರಾಜೇಶ್ ಗುಂಡಿಗದ್ದೆ ನಾಪತ್ತೆ

Update: 2021-09-06 17:45 GMT

ಬೆಳ್ಳಾರೆ: ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ, ಉದ್ಯಮಿ ಹಾಗೂ ಕೃಷಿಕ ರಾಜೇಶ್ ಗುಂಡಿಗದ್ದೆ ಶನಿವಾರ ಮನೆಯಿಂದ ಕಾಣೆಯಾಗಿದ್ದು ಈ ಬಗ್ಗೆ  ಬೆಳ್ಳಾರೆ ಠಾಣೆಯಲ್ಲಿ ಅವರ ಪತ್ನಿ ದೂರು ನೀಡಿದ್ದಾರೆ.

ರಾಜೇಶ್ ಗುಂಡಿಗದ್ದೆ (47) ಎಂಬವರು ಸೆ. 4 ರಂದು ಬೆಳಗ್ಗೆ ಮನೆಯಿಂದ ತಮ್ಮ ಕಾರಿನಲ್ಲಿ ಸುಳ್ಯ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ಅವರ ಪತ್ನಿ  ಬೆಳ್ಳಾರೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ರಾಜೇಶ್ ಗುಂಡಿಗದ್ದೆ ಸುಳ್ಯಕ್ಕೆ ಬಂದು ನಂತರ ಕಲ್ಲುಗುಂಡಿ ಪೇಟೆಯಾಗಿ ಸಂಪಾಜೆ ಕಡೆಗೆ ಪ್ರಯಾಣಿಸಿರುವ ದೃಶ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ. ಹಲವು ವರ್ಷಗಳ ಹಿಂದೆ ಬಾಳಿಲದಲ್ಲಿ ರಬ್ಬರ್ ಉತ್ಪಾದಕರ ಸಂಘ ಸ್ಥಾಪನೆ ಮಾಡಿ ಬಳಿಕ ಬೆಳ್ಳಾರೆಗೆ ಸ್ಥಳಾಂತರ ಮಾಡಿ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಭಾಗದಲ್ಲಿ ವ್ಯವಹಾರ ನಡೆಸುತ್ತಿದ್ದು, ರಾಜೇಶ್ ಗುಂಡಿಗದ್ದೆ ಇದರ ಅಧ್ಯಕ್ಷರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News