ಪಿ.ಎ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Update: 2021-09-07 17:10 GMT

ಕೊಣಾಜೆ: ನಡುಪದವಿನ ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೋಮವಾರ ಶಿಕ್ಷಕರ ಸಂತೋಷಕೂಟ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಫ್ರಾಝ್ ಜೆ. ಹಾಶಿಂ, ಮಾತನಾಡಿ "ಉತ್ತಮ ಭವಿಷ್ಯರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು".

ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್‍ನ ಪ್ರಾಂಶುಪಾಲರಾದ ಡಾ. ರಮೀಝ್ ಎಂ. ಕೆ., ಪಿ.ಎ. ಕಾಲೇಜ್‍ಆಫ್ ಫಾರ್ಮಸಿಯ ಪ್ರಾಂಶುಪಾಲ ರಾದ ಡಾ. ಸಲೀಮುಲ್ಲಾಖಾನ್ ಹಿತನುಡಿಗಳನ್ನಾಡಿದರು.

ಪಿ.ಎ. ಇನ್‍ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲರಾದ ಡಾ ಸತೀಶ್, ಪಿ.ಎ.ಸಿ.ಇ. ಯ ಉಪ ಪ್ರಾಂಶುಪಾಲರಾದ ಪ್ರೋ. ಡಾ. ಶರ್ಮಿಳಾ ಕುಮಾರಿ, ಪಿ.ಎ.ಪಿ.ಟಿ.ಯ ಉಪಪ್ರಾಂಶುಪಾಲರಾದ ಪ್ರೋ. ಇಸ್ಮಾಯಿಲ್ ಖಾನ್, ಸೆಂಟರ್ ಫಾರ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ಮತ್ತು ರಿಸರ್ಚ್‍ನ ಡೈರಕ್ಟರ್ ಆದ ಡಾ. ಸಯ್ಯಿದ್ ಅಮೀನ್, ಕ್ಯಾಂಪಸ್ - ಎ.ಜಿ.ಎಂ. ಶರಫುದ್ದೀನ್ ಪಿ. ಕೆ. ಹಾಗೂ ಪಿ.ಎ.ಇ.ಟಿ.ಯ ಪ್ರವೇಶಾಧಿಕಾರಿ ಶಫ್‍ನಾಝ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಯಶಸ್ವಿನಿ ನಿರೂಪಿಸಿದರು. ಇಬ್ತಿಸಾನ್ ಸ್ವಾಗತಿಸಿ, ವಾಣಿಶ್ರೀ ವಂದಿಸಿದರು. ನೂರ್‍ಜಹಾನ್ ಬೇಗಂ ಹಾಗೂ ಸಾರ ಮಸ್ಕುರುನ್ನೀಸ ತಮ್ಮ ವೃತ್ತಿ ಅನುಭವವನ್ನು ಹಂಚಿಕೊಂಡರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News