×
Ad

ನಿಶ್ಚಿತಾರ್ಥಗೊಂಡ ಯುವತಿ ಚಿನ್ನಾಭರಣದೊಂದಿಗೆ ನಾಪತ್ತೆ: ದೂರು

Update: 2021-09-07 23:04 IST

ಮಂಗಳೂರು, ಸೆ.7: ನಗರದ ಬಳ್ಳಾಲ್‌ ಬಾಗ್‌ನ ಅಪಾರ್ಟ್‌ಮೆಂಟೊಂದರಲ್ಲಿ ವಾಸವಿದ್ದ, ಮದುವೆ ನಿಶ್ಚಿತಾರ್ಥಗೊಂಡಿದ್ದ ರೇಶ್ಮಾ (21) ಎಂಬಾಕೆ ಚಿನ್ನಾಭರಣದೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಾಯಿ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಿಶ್ಚಿತಾರ್ಥ ಸಂದರ್ಭ ಹುಡುಗನ ಮನೆಯವರು 1 ಲಕ್ಷ ರೂ. ಮೌಲ್ಯದ ಚಿನ್ನದ ಸರ, 50 ಸಾವಿರ ರೂ. ಮೌಲ್ಯದ ಉಂಗುರ, 60 ಸಾವಿರ ರೂ. ಮೌಲ್ಯದ ಕಿವಿಯೋಲೆ, ಕಾಲು ಗೆಜ್ಜೆ ತೆಗೆದುಕೊಂಡು ಹೋಗಿದ್ದಾಳೆ. ಅಲ್ಲದೆ ಕೂಲಿ ಕೆಲಸ ಮಾಡಿ ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಮಾಡಿದ್ದ 90 ಸಾವಿರ ರೂ. ವ್ಯಕ್ತಿಯೊಬ್ಬರ ಖಾತೆಗೆ ವರ್ಗಾಯಿಸಿದ್ದಾಳೆ. ಈಕೆಯನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News