×
Ad

ಉಪ್ಪಿನಂಗಡಿ ನಿವಾಸಿ ಸೌದಿಯಲ್ಲಿ ನಿಧನ

Update: 2021-09-07 23:07 IST

ಉಪ್ಪಿನಂಗಡಿ : ಇಲ್ಲಿನ 34 ನೇ ನೆಕ್ಕಿಲಾಡಿಯ ಕೊಡಿಪ್ಪಾಡಿ ಮನೆ ನಿವಾಸಿ ಇಸ್ಮಾಯಿಲ್ ಕೊಡಿಪ್ಪಾಡಿ (48) ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸೋಮವಾರ ರಾತ್ರಿ ಹೃದಯಾಘಾತಕ್ಕೀಡಾಗಿ ನಿಧನರಾದರು.

ರಿಯಾದ್ ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ  ಅವರು, ತಾಯಿ ,  ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿಯನ್ನು  ಅಗಲಿದ್ದಾರೆ. ಪತ್ನಿ ಹಾಗೂ ತಾಯಿಯ  ಒಪ್ಪಿಗೆ ಮೇರೆಗೆ ಮೃತರ ಅಂತ್ಯಕ್ರಿಯೆಯನ್ನು ರಿಯಾದ್ ನಲ್ಲಿಯೇ ನಡೆಸಲಾಗುವುದೆಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News