×
Ad

ಅಕ್ಷಮ್ಯ ಕನ್ನಡ ಚಿತ್ರದ ಟೀಸರ್ ಬಿಡುಗಡೆ

Update: 2021-09-08 22:39 IST

ಮಂಗಳೂರು, ಸೆ.8: ಲಕುಮಿ ಸಿನಿ ಕ್ರಿಯೇಶನ್ಸ್ ಅರ್ಪಿಸುವ ಯುವ ನಿರ್ದೇಶಕ ಶ್ರೀನಿವಾಸ್ ವಿ. ಶಿವಮೊಗ್ಗ ನಿರ್ದೇಶನ ಹಾಗೂ ಕಿಶೋರ್ ಡಿ. ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದ ಅಕ್ಷಮ್ಯ ಕನ್ನಡ ಚಲನಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ನಗರದ ಮಾಲೆಮಾರ್ ಸಮೀಪದ ಎಸ್‌ಡಿಎಂ ಫಿಲ್ಮ್ ಸ್ಟುಡಿಯೋದಲ್ಲಿ ಬುಧವಾರ ನೆರವೇರಿತು.

ಮಂಗಳೂರು ನಗರ ಪೊಲೀಸ್ ಅಯುಕ್ತ ಎನ್. ಶಶಿಕುಾರ್ ಟೀಸರ್ ಬಿಡುಗಡೆಗೊಳಿಸಿದರು.

ಗೋಪಾಲಕೃಷ್ಣ ಕೆ., ಚಿತ್ರದ ನಿರ್ದೇಶಕ ಶ್ರೀನಿವಾಸ್ ಶಿವಮೊಗ್ಗ, ನಿರ್ಮಾಪಕ ಕಿಶೋರ್ ಡಿ ಶೆಟ್ಟಿ, ಸಹ ನಿರ್ಮಾಪಕರಾದ ಮೋಹನ್ ಕೊಪ್ಪಲ ಕದ್ರಿ, ಪ್ರಭು ಉಡುಪಿ, ಲೋಹಿತ್ ಶೆಟ್ಟಿ, ಸಂಗೀತ ನಿರ್ದೇಶಕ ರೂಬಿ ಜೋಸ್, ರಾಹುಲ್ ವಸಿಷ್ಠ, ಎಸ್‌ಡಿಎಂ ಸ್ಟ್ಟುಡಿಯೋ ನಿರ್ದೇಶಕರಾದ ವಿಜಯ್ ಕುಮಾರ್, ಜೆಸ್ಸಿ ಸೆಬೇಸ್ಟಿನ್, ಪ್ರಕಾಶ್ ಶೆಟ್ಟಿ, ಕಲಾವಿದರಾದ ಅರುಣ್ ಬಿಸಿ ರೋಡ್, ಹರೀಶ್ ಬಂಗೇರ, ವಿನಾಯಕ ಜಪ್ಪು, ವಿಶ್ವಾಸ್ ಗುರುಪುರ, ಸುನೀಲ್ ಅಶೋಕ್ ನಗರ, ಲತೀಫ್ ಸಾಣೂರ್, ಗಣೇಶ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News