ಬ್ರಹ್ಮರಕೂಟ್ಲು ಸರಕಾರಿ ಶಾಲಾ ಅಭಿವೃದ್ಧಿ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ
Update: 2021-09-08 22:44 IST
ಬಂಟ್ವಾಳ, ಸೆ.8: ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಉದಯ ಕುಮಾರ್ ಜ್ಯೋತಿಗುಡ್ಡೆ, ಉಪಾಧ್ಯಕ್ಷರಾಗಿ ಚಿತ್ರಾಕ್ಷಿ, ಸದಸ್ಯರಾಗಿ ಅಬ್ದುಲ್ ನಾಸೀರ್ ವಿ.ಎಚ್., ಅಶ್ರಫ್ ಬಿ.ಎಂ.ಟಿ., ನಿಯಾಝ್ ಟಿ., ಝೀನತ್, ಆಯಿಷಾ, ಮುಮ್ತಾಝ್, ಬಸವರಾಜ್, ಮಮತಾ, ಲಕ್ಷಣ, ಪ್ರಮಿಳಾ, ಕಿಶೋರ್, ಸುನೀತಾ, ಜಯಂತಿ, ಹೇಮವತಿ, ನಾಗೇಶ್, ವಿಶ್ವಾನಾಥ್ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.