ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡ ಕೆಎಸ್ ನಝೀರ್ ಅಹ್ಮದ್ ಆ್ಯಂಡ್ ಕೋ. ಸಂಸ್ಥೆ
ಮಂಗಳೂರು : ಖ್ಯಾತ ಪ್ಲೈವುಡ್ ತಯಾರಿಕಾ ಸಂಸ್ಥೆ ಕೆಎಸ್ ನಝೀರ್ ಅಹ್ಮದ್ ಆ್ಯಂಡ್ ಕೋ SATINPLY, ಬೆಂಗಳೂರಿನ ತಾಜ್ ವೆಸ್ಟ್ ಎಂಡ್‍ನಲ್ಲಿ ಆಗಸ್ಟ್ 18ರಂದು ನಡೆದ ನ್ಯಾಷನಲ್ ಆರ್ಕಿಟೆಕ್ಚರ್ ಆ್ಯಂಡ್ ಇಂಟೀರಿಯರ್ ಡಿಸೈನ್ ಎಕ್ಸಲೆನ್ಸ್ ಅವಾರ್ಡ್ 2021 ಸಮಾರಂಭದಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
`ಎಥಿಕಲ್ ಬಿಸಿನೆಸ್ ಅಪ್ರೋಚ್ ಆ್ಯಂಡ್ ಕ್ವಾಲಿಟಿ ಪ್ರಾಡಕ್ಟ್ಸ್' (ಗ್ಲೋಬಲ್ ಎಡಿಶನ್) ವಿಭಾಗದಲ್ಲಿ 'ಮೋಸ್ಟ್ ಪ್ರಾಮಿಸಿಂಗ್ ಆ್ಯಂಡ್ ಇನ್ನೊವೇಟಿವ್ ಪ್ಲೈವುಡ್ ಮ್ಯಾನುಫ್ಯಾಕ್ಚರಿಂಗ್ ಫರ್ಮ್ ಆಫ್ ದಿ ಇಯರ್ 2021' ಪ್ರಶಸ್ತಿ ಮತ್ತು `ಔಟ್‍ಸ್ಟಾಂಡ್ಚಿಂಗ್ ಕಾಂಟ್ರಿಬ್ಯೂಷನ್ ಇನ್ ಬಿಸಿನೆಸ್ ಆ್ಯಂಡ್ ಆಂತ್ರಪ್ರನರ್‍ಶಿಪ್ ಡೊಮೇನ್' ಪ್ರಶಸ್ತಿಯನ್ನು ಪಡೆದಿದೆ. ಎರಡೂ ರಾಷ್ಟ್ರಮಟ್ಟದ ಪ್ರಶಸ್ತಿಗಳಾಗಿವೆ.
ಕಂಪೆನಿಯ ಕುರಿತು: ಕೆಎಸ್ ನಝೀರ್ ಅಹ್ಮದ್ ಆ್ಯಂಡ್ ಕೋ. ಒಂದು ಕುಟುಂಬ ಉದ್ಯಮವಾಗಿದ್ದು ಕೆ ಎಸ್ ಮಖ್ದೂಮ್ ಪೀರನ್ ಅವರು 1930ರಲ್ಲಿ ಕಾರ್ಕಳದಲ್ಲಿ ಟಿಂಬರ್ ಸಂಸ್ಥೆಯಾಗಿ ಆರಂಭಿಸಿದ್ದರು. ಮುಂದೆ ಅವರ ಪುತ್ರ ಕೆ ಎಸ್ ನಝೀರ್ ಅಹ್ಮದ್ ಅವರು ಈ ಸಂಸ್ಥೆಯನ್ನು ಮುನ್ನಡೆಸಿ ಉನ್ನತ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಲವಾರು ಟಿಂಬರ್ ಉತ್ಪನ್ನಗಳ ತಯಾರಿ ಸಂಸ್ಥೆಯಾಗಿ ಮಾರ್ಪಡಿಸಿದ್ದರು.
1994ರಲ್ಲಿ ನಝೀರ್ ಅಹ್ಮದ್ ಅವರ ಅಕಾಲಿಕ ಸಾವಿನ ನಂತರ ರೆಹಾನ ನಝೀರ್ ಆಡಳಿತ ಪಾಲುದಾರೆಯಾಗಿ ಈ ಕಂಪೆನಿಯನ್ನು ಮುನ್ನಡೆಸುವಲ್ಲಿ ಶ್ರಮವಹಿಸಿದ್ದಾರೆ. ಈಗ ರೆಹಾನ ನಝೀರ್, ಅವರ ಪುತ್ರರಾದ ರಿಝ್ವಾನ್ ಅಹ್ಮದ್ ಮತ್ತು ಸಯ್ಯದ್ ರಿಫಾತ್ ಅಹ್ಮದ್ ಅವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಪ್ಲೈವುಡ್ ಕ್ಷೇತ್ರದಲ್ಲಿ ಈ ಕಂಪೆನಿ ತನ್ನದೇ ಆದ ಛಾಪು ಮೂಡಿಸಿದೆ.