ಭಟ್ಕಳ: ಸರಣಿ ಕಳ್ಳತನ; ನಗದು ಸಹಿತ ಚಿನ್ನಾಭರಣ ಕಳವು
Update: 2021-09-08 23:18 IST
ಭಟ್ಕಳ: ಭಟ್ಕಳ ಪುರಸಭೆ ವ್ಯಾಪ್ತಿಯ ಮಾರಿ ಕಟ್ಟಾದಲ್ಲಿ ಮೂರು ಅಂಗಡಿಗಳು ಸೇರಿದಂತೆ ಒಂದು ಮನೆ ಕಳ್ಳತನವಾಗಿದ್ದು, ನಗದು ಮತ್ತು ಚಿನ್ನಾಭರಣ ಕಳವಾದ ಘಟನೆ ನಡೆದಿದೆ.
ಬುರ್ಖಾ ಅಂಗಡಿಯಿಂದ ಸುಮಾರು 30,000 ರೂ. ನಗದು, ಬುರ್ಖಾ ಮತ್ತು ಇತರ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನೊಂದು ಅಂಗಡಿಯಿಂದ ಸುಮಾರು 10,000 ರೂ. ನಗದು ಮತ್ತು ಕೆಲವು ವಸ್ತುಗಳನ್ನು ಕಳವು ಮಾಡಲಾಗಿದೆ. ಸಮೀಪದ ಮನೆಗೆ ನುಗ್ಗಿ ಎರಡು ಚಿನ್ನದ ಸರಗಳು, ಮೂರು ಉಂಗುರಗಳು ಹಾಗೂ 10,000 ರೂ.ನಗದನ್ನು ಕಳವುಗೈದಿದ್ದಾರೆ ಎಂದು ದೂರಲಾಗಿದೆ.