×
Ad

ಶ್ರೀಲಂಕಾ: ಗರ್ಭಧಾರಣೆ ವಿಳಂಬಿಸಲು

Update: 2021-09-09 23:26 IST

ಮಹಿಳೆಯರಿಗೆ ಸೂಚನೆ ಕೊಲಂಬೋ, ಸೆ.9: ದೇಶದಲ್ಲಿ ಕಳೆದ 4 ತಿಂಗಳುಗಳಲ್ಲಿ 40ಕ್ಕೂ ಅಧಿಕ ಗರ್ಭಿಣಿ ಮಹಿಳೆಯರು ಕೊರೋನ ಸೋಂಕಿನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಗರ್ಭಧಾರಣೆಯನ್ನು ವಿಳಂಬಿಸುವಂತೆ ಮಹಿಳೆಯರಿಗೆ ಸೂಚಿಸಲಾಗಿದೆ ಎಂದು ಶ್ರೀಲಂಕಾದ ಆರೋಗ್ಯ ಇಲಾಖೆ ಗುರುವಾರ ಹೇಳಿದೆ. ಸಾಮಾನ್ಯವಾಗಿ ದೇಶದಲ್ಲಿ ಪ್ರತೀ ವರ್ಷ ಪ್ರಸವದ ಸಂದರ್ಭ 90ರಿಂದ 100 ಸಾವು ಸಂಭವಿಸುತ್ತದೆ. ಆದರೆ ಕೊರೋನ ಸೋಂಕಿನ 3ನೇ ಅಲೆ ಆರಂಭವಾದ ಬಳಿಕದ 4 ತಿಂಗಳಲ್ಲಿ 41 ಗರ್ಭಿಣಿ ಮಹಿಳೆಯರು ಮೃತರಾಗಿದ್ದಾರೆ ಎಂದು ಸರಕಾರದ ಆರೋಗ್ಯ ನೆರವು ವಿಭಾಗದ ನಿರ್ದೇಶಕಿ ಚಿತ್ರಮಾಲಿ ಡಿಸಿಲ್ವಾ ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ನೂತನ ವಿವಾಹಿತರು ಮತ್ತು ಮಗು ಬೇಕೆಂದು ಬಯಸುವವರು ಕನಿಷ್ಢ 1 ವರ್ಷ ವಿಳಂಬಿಸುವಂತೆ ಒತ್ತಾಯಿಸುತ್ತೇವೆ ಎಂದು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹರ್ಷ ಅಟ್ಟಪಟ್ಟು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News