ಪಿ.ಎ. ಫಾರ್ಮಸಿ ಕಾಲೇಜಿನಲ್ಲಿ ಸ್ವಚ್ಛತಾ ಆಂದೋಲನ
Update: 2021-09-10 19:22 IST
ಮಂಗಳೂರು : ಶಿಕ್ಷಕರ ದಿನಾಚರಣೆಯ ಅಂಗವಾಗಿ ಪಿ.ಎ. ಫಾರ್ಮಸಿ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳ ಸಹಕಾರದೊಂದಿಗೆ ಕಾಲೇಜಿನ ವಠಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಪರಿಸರ ಸ್ವಚ್ಛತೆಯ ಮಹತ್ವ ಹಾಗೂ ಗಿಡಮೂಲಿಕೆಗಳಲ್ಲಿರುವ ಔಷಧೀಯ ಗುಣಗಳನ್ನು ತಿಳಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ನೈರ್ಮಲ್ಯ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿಯನ್ನುಂಟು ಮಾಡಿದರು.
ಪಿ.ಎ. ಎಜುಕೇಶನಲ್ ಟ್ರಸ್ಟ್ ಇದರ ಸಹಾಯಕ ಮುಖ್ಯ ವ್ಯವಸ್ಥಾಪಕ ಶರ್ಫುದ್ದೀನ್, ಕ್ಯಾಂಪಸ್ ಮೇಲ್ವಿಚಾರಕ ರುದ್ರೇಶ್, ದ್ಯೆಹಿಕ ನಿರ್ದೇಶಕ ಇಕ್ಬಾಲ್, ಎನ್.ಎಸ್.ಎಸ್ ಸಂಯೋಜಕ ಡಾ. ಮುಹಮ್ಮದ್ ಮುಬೀನ್ ಉಪಸ್ಥಿತರಿದ್ದರು.