×
Ad

ಉಡುಪಿ; ಮತಾಂತರ ಮಾಡುತ್ತಾರೆ ಎಂಬುದು ಸುಳ್ಳು ಆರೋಪ : ಪ್ರಶಾಂತ್ ಜತನ್ನ

Update: 2021-09-10 20:09 IST

ಉಡುಪಿ : ತಂಡವೊಂದು ಪ್ರಾರ್ಥನಾ ಸ್ಥಳಕೆ ಅಕ್ರಮ ಪ್ರವೇಶ ಮಾಡಿ, ಕೈಸ್ತರು ಮತಾಂತರ ಮಾಡುತ್ತಾರೆ ಎಂಬುದಾಗಿ ಸುಳ್ಳು ಆರೋಪವನ್ನು ಕ್ರೈಸ್ತ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಉಡುಪಿ ಜಿಲ್ಲಾ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತನ್ನ ತಿಳಿಸಿದ್ದಾರೆ.

ಕಾರ್ಕಳ ತಾಲೂಕಿನ ನಕ್ರೆ ಎಂಬಲ್ಲಿ ಕ್ರೈಸ್ತ ಸಂಸ್ಥೆಗೆ ಸೇರಿದ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಮಹಿಳೆಯರು ಮಕ್ಕಳು ಮತ್ತು ಇತರರ ಮೇಲೆ ಹಲ್ಲೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿ, ಸುಳ್ಳು ಆರೋಪ ಮಾಡಿದ ಜನರ ವಿರುದ್ಧ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒಕ್ಕೂಟ ಒತ್ತಾಯಿಸುತ್ತದೆ ಎಂದು ಹೇಳಿದರು.

ಕ್ರೈಸ್ತ ಸಂಸ್ಥೆಗೆ ಸೇರಿದ ಕಟ್ಟಡದಲ್ಲಿ ಶುಕ್ರವಾರದ ಪ್ರಾರ್ಥನೆ ವಿಧಿವಿಧಾನಗಳು ಮಾಡುವ ಸಮಯದಲ್ಲಿ ಒಂದು ಗುಂಪು ಜನ  ಭಯೋತ್ಪಾದಕರಂತೆ ಒಳಗೆ ನುಗ್ಗಿ ಪ್ರಾರ್ಥನೆಯನ್ನು ಬಲವಂತವಾಗಿ ನಿಲ್ಲಿಸಿ, ನೀವು ಮತಾಂತರ ಮಾಡುತ್ತೀರಿ ಎಂದು ಸುಳ್ಳು ಆರೋಪ  ಮಾಡಿ ಮಹಿಳೆಯರೊಂದಿಗೆ ಅಸಭ್ಯವಾಗಿ  ವರ್ತಿಸಿ ಅವರಿಗೆ ಹೊಡೆದು ಇತರರಿಗೆ ಬೆದರಿಕೆ ಒಡ್ಡಿ ದೈಹಿಕ ಹಲ್ಲೆ ಮಾಡಿ ಭಯಹುಟ್ಟಿಸಿದ ಗುಂಪನ್ನು ತಕ್ಷಣ ಬಂಧಿಸಬೇಕು ಮತ್ತು ಕಾನೂನು ರೀತಿಯಲ್ಲಿ ಅವರಿಗೆ ಶಿಕ್ಷ ಕೊಡಿಸುವ  ಕಾರ್ಯ ಪೊಲೀಸ್ ಇಲಾಖೆ ಮಾಡಬೇಕೆಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News