ವಿಜಯಪುರದಲ್ಲಿ ಮತ್ತೆ ಭೂ ಕಂಪನದ ಅನುಭವ, ಭೂಮಿಯೊಳಗಿನಿಂದ ಭಾರೀ ಸದ್ದು
Update: 2021-09-11 09:50 IST
ವಿಜಯಪುರ, ಸೆ.11: ವಾರದ ಬಳಿಕ ವಿಜಯಪುರ ನಗರದಲ್ಲಿ ಶನಿವಾರ ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಭೂಮಿಯ ಒಳಗಿನಿಂದ ಭಾರೀ ಸದ್ದು ಕೇಳಿಬಂದಿದೆ. ಇದರಿಂದ ಜನತೆ ಬೆಚ್ಚಿಬಿದ್ದಿದ್ದಾರೆ.
ಇಂದು ಬೆಳಗ್ಗೆ 8:18ರಿಂದ 8:20ರ ಅವಧಿಯಲ್ಲಿ ಭೂಮಿ ಕಂಪಿಸಿದ ಅನುಭವ ಹಾಗೂ ಭೂಮಿ ಒಳಗಿನಿಂದ ಭಾರೀ ಶಬ್ಧ ಕೇಳಿಸಿದೆ.
ಸೆಪ್ಟೆಂಬರ್ 5ರಂದು ರಾತ್ರಿ 11:47ರಿಂದ 11:49ರ ನಡುವೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿತ್ತು. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಭೂಕಂಪನದ ಕೇಂದ್ರ ಬಿಂದುವಾಗಿತ್ತು.