×
Ad

ನಿರ್ಫ್ ಶ್ರೇಯಾಂಕ: ಸಂತ ಅಲೋಶಿಯಸ್ ಕಾಲೇಜಿಗೆ ದೇಶದಲ್ಲಿ 95ನೆ ಸ್ಥಾನ

Update: 2021-09-11 11:34 IST

ಮಂಗಳೂರು, ಸೆ.11: ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ಶ್ರೇಯಾಂಕ ಚೌಕಟ್ಟು (National Institutional Ranking Framework) (ನಿರ್ಫ್) 2021ರ ಪಟ್ಟಿಯಲ್ಲಿ ಭಾರತದ ಕಾಲೇಜುಗಳಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ) 95ನೆ ಸ್ಥಾನವನ್ನು ಪಡೆದಿದೆ.ಇದು ಕಾಲೇಜಿಗೆ ಇತ್ತಿಚಿನ ವರ್ಷಗಳಲ್ಲಿ ದೊರೆತ ವಿಶೇಷ ಮತ್ತು ಪ್ರಮುಖ ಸ್ಥಾನವಾಗಿದೆ ಎಂದು ಕಾಲೇಜು ಪ್ರಕಟನೆ ತಿಳಿಸಿದೆ.

ದೇಶದ 6,000 ಕಾಲೇಜುಗಳಲ್ಲಿ ಸೈಂಟ್ ಅಲೋಶಿಯಸ್ ಕಾಲೇಜು ಈ ಸ್ಥಾನವನ್ನು ಪಡೆದಿದೆ. ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನ ನೀಡುವ ವಿವಿಧ ಮಾನದಂಡಗಳೊಂದಿಗೆ ಮೌಲ್ಯಮಾಪನ ನಡೆದಿದ್ದು, ಸೆ.9ರಂದು ಶ್ರೇಯಾಂಕಗಳ ಫಲಿತಾಂಶದ ಘೋಷಣೆಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಮಾಡಿದೆ ಎಂದು ಪ್ರಕಟನೆ ತಿಳಿಸಿದೆ.

ರಾದ್ಯದ ಮೂರು ಕಾಲೇಜುಗಳು ಮಾತ್ರ 100ರೊಳಗೆ ಶ್ರೇಯಾಂಕವನ್ನು ಗಳಿಸಲು ಸಾಧ್ಯವಾಗಿದ್ದು, ಅದರಲ್ಲಿ ಸಂತ ಅಲೋಶಿಯಸ್ ಕಾಲೇಜು ಸೇರಿರುವುದು ಹೆಮ್ಮೆಯ ವಿಚಾರ ಎಂದು ಹೇಳಿರುವ ಸಂಸ್ಥೆಯ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳ ಬದ್ಧತೆಯನ್ನು ಅವರು ಪ್ರಶಂಸಿಸಿದ್ದಾರೆ. ಸಂಸ್ಥೆಗೆ ಪ್ರಾದೇಶಿಕ, ರಾಜ್ಯ ಹಾಗೂ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಮಾದರಿಯನ್ನು ಉತ್ತೇಜಿಸುವ ಉನ್ನತ ಶಿಕ್ಷಣದ ಆದರ್ಶಗಳು ಮತ್ತು ದೃಷ್ಟಿಕೋನವನ್ನು ಸಂಸ್ಥೆಯ ಸಿಬ್ಬಂದಿ ತೋರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News