ದಿಲ್ಲಿಯಲ್ಲಿ ದಾಖಲೆಯ ಮಳೆ: ವಿಮಾನ ನಿಲ್ದಾಣದಲ್ಲಿ ಪ್ರವಾಹ ಸ್ಥಿತಿ, ಆರೆಂಜ್‌ ಅಲೆರ್ಟ್‌ ಜಾರಿ

Update: 2021-09-11 06:32 GMT
Photo: twitter/Anuradha Shukla

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ದಾಖಲೆಯ ಮಳೆಯಿಂದಾಗಿ ನವದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ (ಐಜಿಐ) ವಿಮಾನ ನಿಲ್ದಾಣದ ಕೆಲವು ಭಾಗಗಳು ಜಲಾವೃತಗೊಂಡಿವೆ. ದೆಹಲಿಯಲ್ಲಿ ಮುಂಗಾರು ಮಳೆಯು 1,000 ಮಿಮೀ ಗಡಿಯನ್ನು ಮುರಿದ ಕಾರಣ ಹವಾಮಾನ ಕಚೇರಿಯು 'ಆರೆಂಜ್ ಅಲರ್ಟ್' ಹೊರಡಿಸಿತ್ತು, ಇದು ರಾಷ್ಟ್ರ ರಾಜಧಾನಿಯಲ್ಲಿ 11 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯ ದಾಖಲೆಯಾಗಿದೆ.

ಸುದ್ದಿ ಸಂಸ್ಥೆ ANI ಹಂಚಿಕೊಂಡ ದೃಶ್ಯಗಳು ವಿಮಾನವು ಭಾಗಶಃ ಪ್ರವಾಹಕ್ಕೆ ಸಿಲುಕಿರುವ ರನ್ ವೇನಲ್ಲಿ ನಿಲ್ಲಿಸಿರುವುದನ್ನು ತೋರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮಂದಿ ಬಳಕೆದಾರರು ವಿಮಾನ ನಿಲ್ದಾಣ ನೀರಿನಲ್ಲಿ ಆವೃತವಾಗಿರುವ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಅಥವಾ ಐಎಂಡಿ ಮುಂದಿನ ಎರಡು ಗಂಟೆಗಳಲ್ಲಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News