ಕೋವಿಡ್‌ ಪರಿಹಾರವಾಗಿ ಪಾರಂಪರಿಕ ಔಷಧಿ ʼಕೆಂಪು ಇರುವೆ ಚಟ್ನಿ'ಯನ್ನು ಬಳಸುವಂತೆ ಆದೇಶಿಸಲು ಸಾಧ್ಯವಿಲ್ಲ: ಸುಪ್ರೀಂ

Update: 2021-09-11 07:08 GMT

ಹೊಸದಿಲ್ಲಿ: ಇಡೀ ದೇಶಕ್ಕೆ ಕೋವಿಡ್ -19 ಚಿಕಿತ್ಸೆಗಾಗಿ ಸಾಂಪ್ರದಾಯಿಕ ಔಷಧಿಗಳು ಅಥವಾ ಮನೆಮದ್ದುಗಳನ್ನು ಬಳಸಲು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ ಮತ್ತು ಕೊರೋನ ವೈರಸ್‌ಗೆ ಪರಿಹಾರವಾಗಿ 'ಕೆಂಪು ಇರುವೆ ಚಟ್ನಿ' ಬಳಸಲು ನಿರ್ದೇಶನ ಕೋರಿ ಸಲ್ಲಿಸಲಾದ ಮನವಿಯನ್ನು ವಜಾಗೊಳಿಸಿದೆ.

"ಬಹಳಷ್ಟು ಸಾಂಪ್ರದಾಯಿಕ ಔಷಧ ಪದ್ಧತಿಗಳಿರುವುದನ್ನು ನೀವು ನೋಡುತ್ತೀರಿ, ನಮ್ಮ ಮನೆಗಳಲ್ಲಿಯೂ ಸಹ ನಾವು ಸಾಂಪ್ರದಾಯಿಕ ಔಷಧ ಪದ್ಧತಿಗಳನ್ನು ಹೊಂದಿದ್ದೇವೆ. ಈ ಪರಿಹಾರಗಳು ನಿಮ್ಮ ಸ್ವಂತ ಬಳಕೆಗಾಗಿ ಇದೆ ಹಾಗೂ ಇದರ ಪರಿಣಾಮವನ್ನು ನೀವೇ ಅನುಭವಿಸಿ ಅರಿಯಬೇಕಾದವರು. ಆದರೆ ದೇಶದಾದ್ಯಂತ ಈ ಸಾಂಪ್ರದಾಯಿಕ ಔಷಧಿಯನ್ನು ಅನ್ವಯಿಸುವಂತೆ ನಾವು ಆದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೊಹ್ಲಿ ಅವರ ಪೀಠ ಹೇಳಿದೆ.

ಕೋವಿಡ್‌ಗೆ ಲಸಿಕೆ ಹಾಕಿಸಿಕೊಳ್ಳುವಂತೆ ಒಡಿಶಾದ ಬುಡಕಟ್ಟು ಸಮುದಾಯದ ಅರ್ಜಿದಾರರಾದ ನಯಾಧರ್ ಪಾಧಿಯಾಲ್ ಅವರೊಂದಿಗೆ ಸೂಚಿಸಿದ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ಕೆಂಪು ಇರುವೆ ಚಟ್ನಿ, ಕೆಂಪು ಇರುವೆಗಳು ಮತ್ತು ಹಸಿರು ಮೆಣಸಿನಕಾಯಿಗಳ ಮಿಶ್ರಣವಾಗಿದ್ದು, ಜ್ವರ, ಕೆಮ್ಮು, ನೆಗಡಿ, ಆಯಾಸ, ಉಸಿರಾಟದ ಸಮಸ್ಯೆ ಇತ್ಯಾದಿಗಳ ಚಿಕಿತ್ಸೆಗಾಗಿ ಒಡಿಶಾ ಮತ್ತು ಛತ್ತೀಸಗಡ ಸೇರಿದಂತೆ ದೇಶದ ಬುಡಕಟ್ಟು ವಲಯಗಳಲ್ಲಿ ಸಾಂಪ್ರದಾಯಿಕವಾಗಿ ಔಷಧವೆಂದು ಪರಿಗಣಿಸಲಾಗಿದೆ.

ಅರ್ಜಿದಾರರು "ಕೆಂಪು ಇರುವೆ ಚಟ್ನಿ" ಔಷಧೀಯ ಮೌಲ್ಯವನ್ನು ಹೊಂದಿದೆ ಏಕೆಂದರೆ ಇದು ಫಾರ್ಮಿಕ್ ಆಸಿಡ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12 ಮತ್ತು ಸತುವಿನ ಅಂಶವನ್ನು ಹೊಂದಿದೆ ಮತ್ತು ಕೋವಿಡ್‌ ಗೆ ಇದು ಪರಿಣಾಮಕಾರಿಯಾಗಿದೆ ಎಂದು ಉಲ್ಲೇಖಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News