ಮಳೆಯಲ್ಲಿ ಕೊಡೆಹಿಡಿದು ಗಿಡಗಳಿಗೆ ನೀರುಣಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌: ವ್ಯಾಪಕ ಟ್ರೋಲ್‌

Update: 2021-09-11 08:18 GMT
Photo: Twitter/@NarendraSaluja

ಭೋಪಾಲ್:‌ ಸುರಿಯುವ ಮಳೆಯ ನಡುವೆ ಸಹಾಯಕನೋರ್ವ ಕೊಡೆ ಹಿಡಿದುಕೊಂಡು, ಅದರಡಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಗಿಡಗಳಿಗೆ ನೀರುಣಿಸುತ್ತಿರುವ ಚಿತ್ರವೊಂದು ಸದ್ಯ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ಈ ಚಿತ್ರವು ಟ್ವಿಟರ್‌ ನಲ್ಲಿ ವ್ಯಾಪಕ ಟ್ರೋಲ್‌ ಗೆ ಒಳಗಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರ ಪ್ರಚಾರ ತಂಡದ ಅಧಿಕಾರಿಯೋರ್ವರು, "ಹವಾಮಾನ ಪ್ರತಿಕೂಲವಾಗಿದ್ದರೂ ಸಹ ಮುಖ್ಯಮಂತ್ರಿಗಳು ಪ್ರತಿದಿನ ಗಿಡಗಳನ್ನು ನೆಡುತ್ತಾರೆ. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದ್ದು" ಎಂದು ಹೇಳಿದ್ದಾರೆ.

ಟೈಲ್ಸ್‌ ಮೇಲೆ ನಿಂತು ಗಿಡಕ್ಕೆ ನೀರು ಹಾಕುತ್ತಿರುವ ಚೌಹಾಣ್‌ ಕುರಿತು ಪ್ರತಿಪಕ್ಷ ಕಾಂಗ್ರೆಸ್‌ ವ್ಯಂಗ್ಯವಾಡಿದೆ. "ಮಣ್ಣಿನ ಮಗ, ರೈತನ ಮಗ, ದುಬಾರಿ ಬೆಲೆಯ ಟೈಲ್ಸ್‌ ಮೇಲೆ ನಿಂತುಕೊಂಡು ಮಳೆಯ ನಡುವೆ ಕೊಡೆ ಹಿಡಿದುಕೊಂಡು ಗಿಡಗಳಿಗೆ ನೀರುಣಿಸುತ್ತಿರುವ ಅಪರೂಪದ ದೃಶ್ಯ" ಎಂದು ವ್ಯಂಗ್ಯವಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News