ಮತಾಂತರ, ಗೋ ಕಳ್ಳತನ ವಿರುದ್ಧ ಹೋರಾಟಕ್ಕೆ ಬೆಂಬಲ : ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ
ಕಾರ್ಕಳ: ಸದಾ ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ರೂಪಿಸಿ, ಹಿಂದುಗಳಿಗೆ ಆಮಿಷ ನೀಡಿ ಮೋಸದಿಂದ ಅವರನ್ನ ಮತಾಂತರ ಮಾಡುವ ಮಿಷನರಿಗಳ ವಿರುದ್ಧ ಕಳೆದೊಂದು ತಿಂಗಳಿನಿಂದ ಹೊರಾಟಕ್ಕೆ ಬಿಜೆಪಿ ಯುವ ಮೋರ್ಚಾ ಬೆಂಬಲಿಸುತ್ತದೆ ಎಂದು ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ತಿಳಿಸಿದರು.
ಕಾರ್ಕಳದ ನಕ್ರೆಯಲ್ಲಿ ಗಣೇಶ ಚತುರ್ಥಿಯಂದು ಹಿಂದುಗಳಿಗೆ ಆಮಿಷ ಒಡ್ಡಿ ಮತಾಂತರದಲ್ಲಿ ತೊಡಗಿದ್ದ ವೇಳೆ ಹಿಂದುತ್ವ ಸಂಘಟನೆಯ ತಾಳ್ಮೆಯ ಕಟ್ಟೆ ಒಡೆದು ದಾಳಿ ಮಾಡಿರುತ್ತವೆ. ಈ ದಾಳಿಯನ್ನ ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲೆ ಮುಕ್ತವಾಗಿ ಸಮರ್ಥಿಸುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಮತಾಂತರ ಹಾಗು ಜಾನುವಾರು ಕಳ್ಳತನ ಹಾಗು ಹತ್ಯೆಯ ವಿರುದ್ಧ ಹಿಂದುತ್ವ ಸಂಘಟನೆಗಳೊಂದಿಗೆ ಬಿಜೆಪಿ ಯುವ ಮೋರ್ಚ ಉಡುಪಿ ಜಿಲ್ಲೆ ಒಟ್ಟು ಸೇರಿ ಮಿಷನರಿ ಹಾಗು ಗೋ ಕಳವು ವಿರುದ್ಧ ಸಮರಕ್ಕೆ ನಿಲ್ಲಲಿವೆ ಹಾಗು ಈ ವಿಚಾರವಾಗಿ ಸಂಘಟನೆಗಳು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯಗಳಿಗೂ ಯುವ ಮೋರ್ಚ ಬೆಂಬಲವಾಗಿ ನಿಲ್ಲಲಿದೆ ಎಂದರು.