ಮತಾಂತರ ಕೇಂದ್ರದ ಮೇಲಿನ ದಾಳಿ ಸ್ವಾಗತಾರ್ಹ: ರತ್ನಾಕರ್ ಅಮೀನ್
ಕಾರ್ಕಳ: ಅಮಾಯಕ ಹಿಂದೂಗಳನ್ನು ಹಣದ ಆಮಿಷವೊಡ್ಡಿ ಬಲವಂತವಾಗಿ ಮತಾಂತರ ಮಾಡುತ್ತಿದ್ದವರ ಮೇಲೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಡೆಸಿರುವ ದಾಳಿ ಸ್ವಾಗತಾರ್ಹ ಎಂದು ಕಾರ್ಕಳ ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಕ್ಕುಂದೂರು ಗ್ರಾಮದ ನಕ್ರೆ ಎಂಬಲ್ಲಿನ ಪ್ರಗತಿ ಕಂಪೌಂಡ್ ಕಟ್ಟಡದಲ್ಲಿ ಪ್ರಾರ್ಥನೆಯ ನೆಪದಲ್ಲಿ ದುರ್ಬಲ ಮನಸ್ಸಿನ ಹಿಂದುಳಿದ ವರ್ಗದ ಹಾಗೂ ಪರಿಶಿಷ್ಟ ಸಮುದಾಯದವರಿಗೆ ಹಣದ ಆಮಿಷದ ಮೂಲಕ ಅವರನ್ನು ಮಿಷನರಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಯತ್ನ ನಡೆಸಿರುವುದು ಖಂಡನೀಯ, ಇಂತಹ ಘಟನೆಗಳು ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದು ಪೊಲೀಸರು ಇದನ್ನು ಮಟ್ಟಹಾಕಬೇಕಿದೆ. ಹಿಂದೂ ದೈವ ದೇವರುಗಳನ್ನು ಅವಹೇಳನ ಮಾಡಿ, ಜನರಿಗೆ ಮಂಕುಬೂದಿ ಎರಚಿ ಅವರನ್ನು ಮತಾಂತರ ಮಾಡುವ ಮಿಶನರಿಗಳನ್ನು ತಕ್ಷಣವೇ ಬಂಧಿಸಬೇಕು. ಪ್ರಾರ್ಥನೆಯ ನೆಪದಲ್ಲಿ ಹಿಂದೂಗಳನ್ನು ಮತಾಂತರ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕು ಎಂದು ರತ್ನಾಕರ್ ಅಮೀನ್ ಆಗ್ರಹಿಸಿದ್ದಾರೆ.