ಮಳೆಗೆ ದಲಿತರ ಎರಡು ಮನೆಗಳು ಸಂಪೂರ್ಣ ಕುಸಿತ
Update: 2021-09-11 19:06 IST
ಉಡುಪಿ, ಸೆ.11: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮೂಡುಬೆಟ್ಟು ಪರಿಶಿಷ್ಟ ಜಾತಿಯ ಕಾಲನಿಯಲ್ಲಿರುವ ದಲಿತ ಮಹಿಳೆ ಲೀಲಾ ಮತ್ತು ಪ್ರಕಾಶ್ ಎಂಬವರ ಎರಡು ಮನೆಗಳು ಕುಸಿದು ಬಿದ್ದಿದ್ದು, ಈ ಎರಡು ಕುಟುಂಬಗಳು ವಾಸಿಸಲು ಸೂಕ್ತ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್, ತಾಲೂಕು ಸಂಚಾಲಕ ಶಂಕರ್‌ದಾಸ್, ನಗರ ಶಾಖೆಯ ಸಂಚಾಲಕ ಶಿವಾನಂದ ಮೂಡುಬೆಟ್ಟು, ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಸುರೇಶ್, ಸಂಪೂರ್ಣ ಕುಸಿಯುವ ಹಂತ ದಲ್ಲಿರುವ ಮನೆಗಳಲ್ಲಿರುವ ಕುಟುಂಬವನ್ನು ಸ್ಥಳಾಂತರಿಸಿದರು.
ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು, ಎರಡೂ ಕುಟುಂಬಗಳಿಗೆ ನೆರೆ ಪರಿಹಾರ ನಿಧಿಯಿಂದ ಕೂಡಲೇ ಮನೆ ಮಂಜೂರು ಮಾಡುವಂತೆ ಒತ್ತಾಯಿಸ ಲಾಗಿದೆ ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.