×
Ad

ಮಲಬಾರ್ ಗೋಲ್ಡ್‌ನಿಂದ 100ನೇ ಫಲಾನುಭವಿಗೆ ಚಿನ್ನ ಹಸ್ತಾಂತರ

Update: 2021-09-11 19:12 IST

ಉಡುಪಿ, ಸೆ.11: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಅಧೀನದಲ್ಲಿ ರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ಹೆಣ್ಣು ಮಕ್ಕಳ ಮದುವೆಗೆ ಚಿನ್ನ ಕೊಡುವ ಗೋಲ್ಡನ್ ಹಾರ್ಟ್ ಯೋಜನೆಯಲ್ಲಿ ಕಾರ್ಕಳದ ಎಣ್ಣೆಹೊಳೆಯ 100ನೇ ಫಲಾನುಭವಿಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಬಂಗಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರಹ್ಮಾನ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಹೌಸಿಂಗ್ ಚಾರಿಟಿಯ ಮೂಲಕ ಮನೆ ಕಟ್ಟಲು 55 ಕುಟುಂಬಗಳಿಗೆ 49 ಲಕ್ಷ ರೂ., 595 ವಿದ್ಯಾರ್ಥಿನಿಯರಿಗೆ ಮಹಿಳಾ ಸಬಲೀಕರಣದ ಅಡಿಯಲ್ಲಿ 14 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.

665 ರೋಗಿಗಳಿಗೆ ಪ್ರತಿ ತಿಂಗಳು ಔಷಧಿ ನೀಡಲಾಗುತ್ತಿದೆ. ಕೊರೋನ ಸಂದರ್ಭದಲ್ಲಿ 8000ಕ್ಕಿಂತಲೂ ಅಧಿಕ ಅರ್ಹರಿಗೆ ಆಹಾರ ಕಿಟ್ಗಳನ್ನು ನೀಡಲಾಗಿದೆ. ವಿಶ್ವ ಪರಿಸರದ ಅಂಗವಾಗಿ 10,000ಕ್ಕಿಂತಲೂ ಅಧಿಕ ಗಿಡಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್‌ನ ಜಿ.ಆರ್.ಎಂ. ರಾಘವೇಂದ್ರ ನಾಯಕ್, ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News