×
Ad

ಸೆ.12: ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್‌ ವತಿಯಿಂದ ರಕ್ತದಾನ ಶಿಬಿರ

Update: 2021-09-11 19:19 IST

ಮಂಗಳೂರು, ಸೆ.11: ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್‌ನ (ಎಚ್‌ಐಎಫ್) ವೈದ್ಯಕೀಯ ಘಟಕ ಹಾಗೂ ಮಂಗಳೂರು ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಸೆ.12ರಂದು ಬೆಳಗ್ಗೆ 9 ಗಂಟೆಗೆ ನಗರದ ವಾಸ್ಲೇನ್‌ನ ಎಚ್‌ಇಸಿಸಿ (ಮಸ್ಜಿದ್ ಉಲ್ ಇಹ್ಸಾನ್) ಆವರಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದಲ್ಲಿ ಗೌರವ ಅತಿಥಿಗಳಾಗಿ ಯುನಿಟಿ ಆಸ್ಪತ್ರೆಯ ನಿರ್ದೇಶಕ ಹಾಗೂ ಯುನಿಟಿ ಅಕಾಡಮಿ ಆಫ್ ಎಜುಕೇಶನ್‌ನ ಟ್ರಸ್ಟಿ ಅಶ್ರಫ್ ಮೊಯ್ದೀನ್ ಹಬೀಬ್, ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನ ನಿರ್ದೇಶಕಿ ಡಾ. ದೀಪಾ ಅಡಿಗ ಎಸ್.ಎ., ಎಚ್‌ಐಎಫ್ ಇಂಡಿಯಾ ಅಧ್ಯಕ್ಷ ನಝೀಮ್ ಎ.ಕೆ. ಭಾಗವಹಿಸಲಿದ್ದಾರೆ.

ಮಹಿಳೆಯರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಚ್‌ಐಎಫ್‌ನ ವೈದ್ಯಕೀಯ ಘಟಕದ ಸಂಚಾಲಕ ರಿಝ್ವಾನ್ ಪಾಂಡೇಶ್ವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News