×
Ad

ಅಲೆವೂರಲ್ಲಿ ಬಂಗಾರದ ಗಣಪತಿ ಪ್ರತಿಷ್ಠಾಪನೆ

Update: 2021-09-11 19:23 IST

ಉಡುಪಿ, ಸೆ.11: ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಭಕ್ತರು ಮತ್ತು ಸಮಿತಿ ವತಿಯಿಂದ 10 ಲಕ್ಷ ರೂ. ಮೌಲ್ಯದ ಬಂಗಾರದ ಮೂರ್ತಿ ಯನ್ನು ಸಮರ್ಪಿಸಲಾಯಿತು.

ಬಂಗಾರದ ಗಣೇಶ ದೇವರ ವಿಗ್ರಹವನ್ನು ಹೆರ್ಗ ನಾಗರಾಜ ಶರ್ಮ ರಚಿಸಿ ದ್ದಾರೆ. ಗಣೇಶೋತ್ಸವ ಧಾರ್ಮಿಕ, ಸಾಸ್ಕೃತಿಕ ಚಟುವಟಿಕೆ ಜತೆಗೆ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಅಲೆವೂರು ಗಣೇಶೋತ್ಸವ ಸಮಿತಿ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಶುಕ್ರವಾರ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ ಜತೆಗೆ ಬಂಗಾರದ ಗಣಪತಿ ಪ್ರತಿಷ್ಠಾಪನೆ ಪೂಜೆ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News