ಬಿಜೆಪಿ ಜನರ ಜೀವನವನ್ನು ನರಕ ಸದೃಶ ಮಾಡಿದೆ : ವಿನಯಕುಮಾರ್ ಸೊರಕೆ

Update: 2021-09-11 14:20 GMT

ಕಾಪು : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಅಸಂಬದ್ಧ ಆರ್ಥಿಕ ನೀತಿಯಿಂದ ಇಡೀ ದೇಶವನ್ನೇ ಆರ್ಥಿಕವಾಗಿ  ದಿವಾಳಿಯಾಗಿಸಿದೆ. ಅಲ್ಲದೆ ಜಿಡಿಪಿಗೆ ಹೊಸ ಭಾಷ್ಯವನ್ನು ನೀಡಿದ ಸಾಧನೆಯಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಅವರು ಸೋಮವಾರ ಕಾಪು ರಾಜೀವ್ ಭವನದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸುಮಿತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಿತ್ಯ-ಬಳಕೆಯ ಪ್ರಮುಖ ಕಚ್ಛಾ ತೈಲಗಳ ಬೆಲೆಯನ್ನು ದಿನೇ ದಿನ ಏರಿಸುತ್ತಿರುವುದನ್ನೇ ಬಿಜೆಪಿಗರು ದೇಶದ ಜಿಡಿಪಿ (ಗ್ಯಾಸ್, ಡೀಸೆಲ್, ಪೆಟ್ರೋಲ್) ದರ ಏರುಗತಿಯಲ್ಲಿದೆ ಎಂದು ಭ್ರಮಿಸುತ್ತಿದ್ದಾರೆ. ಬಿಜೆಪಿ ಜನರ ಜೀವನವನ್ನು ನರಕ ಸದೃಶ ಮಾಡಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿದರು. ಬ್ಲಾಕ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ಬಲ್ಲಾಳ್, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ, ಹಿಂದುಳಿದ ವರ್ಗ ಘಟಕದ ರಾಜ್ಯ ಕಾರ್ಯದರ್ಶಿ ಶಿವಾಜಿ ಸುವರ್ಣ, ಬ್ಲಾಕ್ ಸಮಿತಿ ಉಪಾಧ್ಯಕ್ಷ ವಿಕ್ರಂ ಕಾಪು, ಪ್ರಧಾನ ಕಾರ್ಯದರ್ಶಿಗಳಾದ ಜಿತೇಂದ್ರ ಫುರ್ಟಾಡೋ, ನವೀನ್ ಎನ್.ಶೆಟ್ಟಿ, ಸುನಿಲ್ ಬಂಗೇರ, ಆಶಾ ಕಟಪಾಡಿ , ಪ್ರಶಾಂತ್ ಜತ್ತನ್ನ, ದೀಪಕ್ ಎರ್ಮಾಳ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಕ್, ಎಸ್.ಸಿ,ಎಸ್.ಟಿ ಘಟಕದ ಅಧ್ಯಕ್ಷ  ಸುಧಾಕರ್ ಕೆ., ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಪ್ರಮುಖರಾದ ಸರಸು ಡಿ.ಬಂಗೇರ, ಹಸನಬ್ಬ ಶೇಕ್ ಶಿರ್ವ, ವಿಲ್ಸನ್ ರಾಡ್ರಿಗಸ್,  ಮಾಧವ್ ಪಾಲನ್, ಲವ ಕರ್ಕೇರ, ಗೋಪಾಲ್ ಪೂಜಾರಿ, ಎ.ರಹಿಮಾನ್ ಕಣ್ಣಂಗಾರ್, ಸುಧೀರ್ ವೈ., ಶ್ರೀಕರ್ ಸುವರ್ಣ ಕಟಪಾಡಿ,  ಲಕ್ಷ್ಮೀಶ ತಂತ್ರಿ ಕಲ್ಯಾ, ಕೆ.ಎಚ್.ಉಸ್ಮಾನ್, ಮೆಲ್ವಿನ್ ಡಿಸೋಜ, ಗಣೇಶ್ ಕೋಟ್ಯಾನ್,  ಕರುಣಾಕರ ಪಡುಬಿದ್ರಿ, ಇಮ್ರಾನ್ ಮಜೂರ್,  ಪ್ರಭಾಕರ್ ಕೈಪುಂಜಾಲ್, ಮಧ್ವರಾಜ್ ಸುವರ್ಣ, ಕೇಶವ್ ಸಾಲ್ಯಾನ್, ಕಿಶೋರ್ ಎರ್ಮಾಳ್, ಝಹೀರ್ ಅಹ್ಮದ್, ನಾಗಭೂಷಣ್ ರಾವ್, ದೇವರಾಜ್ ಕೋಟ್ಯಾನ್,  ಜ್ಯೋತಿ ಮೆನನ್, ಸುಚರಿತ ಲಕ್ಷ್ಮಣ, ರಾಜೇಶ್ ಕುಲಾಲ್  ಅಶೋಕ್ ನಾಯರಿ  ಮತ್ತು ಗ್ರಾಮ್ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ಗಣೇಶ್ ಆಚಾರ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಅಮೀರ್ ಮೊಹಮ್ಮದ್ ಕಾರ್ಯಕ್ರಮ ನಿರೂಪಿಸಿದರು, ದಿನೇಶ್ ಕೋಟ್ಯಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News