ಕಾಪು: 'ನಮ್ಮ ನಾಡ ಒಕ್ಕೂಟ'ದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಕಾಪು: ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ಘಟಕದ ವತಿಯಿಂದ ಕಾಪು ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಪುವಿನ ಜಮೀಯತುಲ್ ಫಲಾಹ್ ಕಚೇರಿನಲ್ಲಿ ಗುರುವಾರ ಸನ್ಮಾನ ಕಾರ್ಯಕ್ರಮ ನಡೆಯಿತು.
ಒಕ್ಕೂಟದ ಅಧ್ಯಕ್ಷ ಅಶ್ರಫ್ ಪಡುಬಿದ್ರೆ ಅಧ್ಯಕ್ಷತೆ ವಹಿಸಿದ್ದರು. ನಮ್ಮ ನಾಡ ಒಕ್ಕೂಟ ಇದರ ಕೇಂದ್ರ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಮೂಡುಬಿದಿರೆ, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ, ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಜಮೀಯತುಲ್ ಫಲಾಹ್ ಇದರ ಉಡುಪಿ ಹಾಗು ಮಂಗಳೂರು ಜಿಲ್ಲಾಧ್ಯಕ್ಷ ಶಫಿ ಅಹ್ಮದ್ ಕಾಝಿ, ಒಕ್ಕೂಟದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಮಾಲ್ ಉಸ್ತಾದ್ ಮಲ್ಪೆ, ಕಾಪು ತಾಲೂಕು ಉಪಾಧ್ಯಕ್ಷ ಮುಹಮ್ಮದ್ ಇರ್ಫಾನ್, ಕಾಪು ತಾಲೂಕು ಕೋಶಾಧಿಕಾರಿ ರಶೀದ್, ಕಾಪು ತಾಲೂಕು ಜೊತೆ ಕಾರ್ಯದರ್ಶಿ ಸನಾವರ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಝಾಕ್ ಹುಸೈನ್, ಜಿಲ್ಲಾ ಸಮಿತಿ ಸದಸ್ಯರಾದ ಸಾದಿಕ್ ದಿನಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಾಫಿಲ್ ಮೊಹಮ್ಮದ್ ರಾಝಿ ವೈಬಿಸಿ ಕಿರಾತ್ ಪಠಿಸಿದರು. ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ 12 ವಿದ್ಯಾರ್ಥಿಗಳು ಹಾಗು ಹಾಫಿಳ್‍ಗಳಾದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಯೂಸುಫ್ ಕಾರ್ಯಕ್ರಮ ನಿರೂಪಿಸಿದರು.