ಬಂಟ್ವಾಳ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
Update: 2021-09-11 20:15 IST
ಬಂಟ್ವಾಳ, ಸೆ.11: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಶನಿವಾರ ಪತ್ತೆಯಾಗಿದೆ.
ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಕೋಡಿಮಜಲು ಎಂಬವರ ಪುತ್ರ ಯಜ್ಞೇಶ್ (21) ನಾಪತ್ತೆಯಾಗಿದ್ದ ಯುವಕ.
ಸೆ.8ರಿಂದ ಯಜ್ಞೇಶ್ ಕಾಣೆಯಾದ ಬಗ್ಗೆ ಆತನ ತಂದೆ ಪ್ರಕಾಶ್ ಕೋಡಿಮಜಲು ಸೆ.11ರಂದು ಬೆಳಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಧ್ಯಾಹ್ನದ ವೇಳೆಗೆ ಮಂಗಳೂರು ಸಮೀಪದ ಅಡ್ಯಾರ್ ನೇತ್ರಾವತಿ ನದಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.
ಡಿಪ್ಲೋಮ ಇಂಜಿನಿಯರಿಂಗ್ ಪದವಿದರಾಗಿರುವ ಯಜ್ಞೇಶ್ ಬಿ.ಸಿ.ರೋಡಿನ ಕುಶನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ವಿದ್ಯಾಭ್ಯಾಸದ ಬಳಿಕ ಸರಿಯಾದ ಕೆಲಸ ಸಿಕ್ಕಿಲ್ಲ ಎಂದು ಬೇಸರಗೊಂಡಿದ್ದ ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.