×
Ad

ಮಂಗಳೂರು: ‘ಉಮ್ಮಗೊರು ಅಗ’ ಯೋಜನೆಯ ವತಿಯಿಂದ ಮೂರು ಮನೆಗಳ ಹಸ್ತಾಂತರ

Update: 2021-09-11 21:47 IST

ಮಂಗಳೂರು : ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ‘ಉಮ್ಮಗೊರು ಅಗ’ (ತಾಯಿಗೊಂದು ಮನೆ) ಯೋಜನೆಯಡಿಯಲ್ಲಿ ನಿರ್ಮಿಸಿದ ಮೂರು ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಮಂಗಳೂರು ತಾಲೂಕಿನ ಮಲಾರ್ ಕೋಡಿಯಲ್ಲಿ ನಿರ್ಮಿಸಿದ ಪ್ರಾಜೆಕ್ಟ್ ಸಂಖ್ಯೆ 2 ನ್ನು ಆಸಿಯಾರವರಿಗೆ, ರಾಜಗುಡ್ಡೆ ಹರೇಕಳದಲ್ಲಿ ನಿರ್ಮಿಸಿದ ಪ್ರಾಜೆಕ್ಟ್ ಸಂಖ್ಯೆ 3 ನ್ನು ಜಮೀಲಾರವರಿಗೆ ಮತ್ತು ಬಂಟ್ವಾಳ ತಾಲೂಕಿನ ಲೊರೆಟ್ಟೋಪದವು ನಲ್ಲಿ ನಿರ್ಮಿಸಿದ ಪ್ರಾಜೆಕ್ಟ್ ಸಂಖ್ಯೆ 4 ನ್ನು ರಶೀದಾ ಅವರಿಗೆ ಇಂದು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೊರೆಟ್ಟೊಪದವು ಮಸೀದಿಯ ಖತೀಬ್ ಮುಹಮ್ಮದ್ ಶರೀಫ್ ಅರ್ಶದಿ, ಬಂಟ್ವಾಳ ರೇಂಜ್ ಜಮಿಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್ ಮದನಿ, ದೇರಿಕಟ್ಟೆ ರಾಜಗುಡ್ಡೆ  ಮಸೀದಿಯ ಖತೀಬ್ ಯಹ್ಯಾ ಫೈಝಿ ಅಲ್ ಮಹ್ಬರಿ,  ಪದ್ಮಶ್ರೀ ಹರೇಕಳ ಹಾಜಬ್ಬ, ಪಿ.ಎಸ್ ಬೀಡೀಸ್ ಮಾಲಕ ಪಿ.ಎಸ್ ಅಬ್ದುಲ್ ಹಮೀದ್, ಎಸ್.ಎ.ಎಲ್ ರೆಂಟಲ್ ಕನ್‍ಸ್ಟ್ರಕ್ಷನ್ ಮಾಲಕ ಹಾಜಿ ಅಬ್ದುಲ್ ಲತೀಫ್ ಮಿತ್ತಬೈಲ್, ಭಾರತ್ ಕನ್‍ಸ್ಟ್ರಕ್ಷನ್‍ನ ಆಡಳಿತ ನಿರ್ದೇಶಕ ಎಸ್.ಎಂ ಮುಸ್ತಫಾ, ಲೊರೊಟ್ಟೊಪದವು ಮಸೀದಿಯ ಉಪಾಧ್ಯಕ್ಷ ಹಾಗೂ ಫನ್ ಟೈಮ್ ಹೋಟೆಲ್ ಮಾಲಕ ಅಹ್ಮದ್ ಬಾವಾ, ಲೈಫ್ ಲೈನ್ ಹೆಲ್ತ್ ಕೇರ್ ಫ್ಲಸ್ ನ ಡಾ. ಮುಬಶ್ಶಿರ್ ಬಂಟ್ವಾಳ, ಜೋಟನ್ ಪೈಂಟ್ಸ್ ನ ಮಾಲಕ ಅಖೀಲ್ ಖಾನ್, ಮಾಸೂನ್ ಟೈಲ್ಸ್ ನ ಮಾಲಕ ಮುನೀರ್ ಮೊಯ್ದಿನ್, ಉದ್ಯಮಿ ಸಮೀರ್ ವಿಶ್ವಾಸ್ ವೀನಸ್, ಸರ್ಜಿಕಲ್ ವಿಭಾಗದ ಅಬ್ದುಲ್ ಮಸೂದ್ ವಿಶ್ವಾಸ್ ವೀನಸ್,  ನಮ್ಮ ನಾಡ ಒಕ್ಕೂಟದ ಮಂಗಳೂರು ತಾಲೂಕು ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಶೇಖ್ ಇಸ್ಹಾಖ್ ಕೋಡಿಂಬಾಳ, ವಿಶ್ವಾಸ್ ರಿಯಲ್ಟಿ ಪಾಲುದಾರ ಸುಲೈಮಾನ್ ಶೇಖ್ ಬೆಳುವಾಯಿ, ಸುಲ್ತಾನ್ ಬಿಲ್ಡರ್ಸ್ ನ ಆಡಳಿತ ನಿರ್ದೇಶಕ ಮುಹಮ್ಮದ್ ಯು.ಬಿ, ಲೊರೆಟ್ಟೊಪದವು ಮಸೀದಿಯ ಕೋಶಾಧಿಕಾರಿ ಬಿ.ಎಸ್ ಸಿದ್ದೀಖ್, ಮಂಡಾಡಿ ಯತೀಂಖಾನಾದ ಅಧ್ಯಕ್ಷ ಅಬ್ದುಲ್ ಹಮೀದ್, ಕಂಟ್ರಾಕ್ಟರ್ ಗಫ್ಫಾರ್ ಲೊರೆಟ್ಟೊಪದವು,  ಉದ್ಯಮಿ ಅಬ್ದುಲ್ ಹಮೀದ್ ನೆಹರು ನಗರ, ಸಮಾಜ ಸೇವಕ ಮೊಹ್ಸಿನ್ ಉಳ್ಳಾಲ, ಉಮ್ಮಗೊರು ಅಗ ಯೋಜನೆಯ ಸಿದ್ದೀಕ್ ಚಾರ್ಮಾಡಿ ಬ್ರೈಟ್ ಸ್ಟೀಲ್, ಟ್ಯಾಲೆಂಟಿನ ಸದಸ್ಯರಾದ ಅಬ್ದುಲ್ ಮಜೀದ್ ತುಂಬೆ, ಹುಸೈನ್ ಬಡಿಲ, ನಕಾಶ್ ಬಾಂಬಿಲ ಮೊದಲಾದವರು ಉಪಸ್ಥಿತರಿದ್ದರು.

ಉಮ್ಮಗೊರು ಅಗ ಯೋಜನೆಯ ಅಧ್ಯಕ್ಷ ಇಂಜಿನಿಯರ್ ಮುಸ್ತಫಾ ಅಡ್ಡೂರು ದೆಮ್ಮಲೆ ಅಧ್ಯಕ್ಷತೆ ವಹಿಸಿದ್ದರು. ಉಮ್ಮಗೊರು ಅಗ ಯೋಜನೆಯ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಸ್ಟರ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.

ಟ್ಯಾಲೆಂಟ್‍ನ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಟ್ಯಾಲೆಂಟ್‍ನ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಧನ್ಯವಾದಗೈದರು. ಈ ಕಾರ್ಯಕ್ರಮದಲ್ಲಿ ಕಂಟ್ರಾಕ್ಟರ್ ಗಳಾದ ಶಾಫಿ ಲೊರೆಟ್ಟೊಪದವು, ಸಾದಿಖ್ ದೆಬ್ಬೇಲಿ, ಸಮಾಜ ಸೇವಕ ರಿಯಾಝ್ ಲೊರೆಟ್ಟೊಪದವು ರವರನ್ನು ಸನ್ಮಾನಿಸಲಾಯಿತು.

ವಿಧವೆಯರು, ವಿಕಲಚೇತನರು ಹಾಗೂ ಅಸಹಾಯಕ ಹೆಣ್ಣು ಮಕ್ಕಳಿರುವ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಉದ್ದೇಶದಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ರವರ ಮಾರ್ಗದರ್ಶನದಲ್ಲಿ ‘ಉಮ್ಮಗೊರು ಅಗ’ ಯೋಜನೆ ಸ್ಥಾಪನೆಗೊಂಡಿದ್ದು, ಈಗಾಗಲೇ ನಾಲ್ಕು ಮನೆಗಳನ್ನು ನಿರ್ಮಿಸಿದೆ. ಒಂದು ಜಮಾಅತ್‍ಗೆ ಒಂದು ಮನೆ ಮಾತ್ರ ನಿರ್ಮಿಸಿಕೊಡುತ್ತಿದ್ದು, ಈ ವರ್ಷಕ್ಕೆ ಬೇಕಾದ ಎಲ್ಲಾ ಅರ್ಜಿಗಳು ಬಂದಿವೆ. ಈ ಕಾರ್ಯಕ್ರಮದ ಯಶಸ್ವಿಗೆ ನಮ್ಮೆಲ್ಲಾ ದಾನಿಗಳು ಸಹಕರಿಸುವಂತೆ ಉಮ್ಮಗೊರು ಅಗ ಯೋಜನೆಯ ಅಧ್ಯಕ್ಷ ಇಂಜಿನಿಯರ್ ಮುಸ್ತಫಾ ಅಡ್ಡೂರು ದೆಮ್ಮಲೆ ವಿನಂತಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News